Friday, January 24, 2025
ಸುದ್ದಿ

ಮೇ 8ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ಮತಯಾಚನೆ ರ‍್ಯಾಲಿ -ಕಹಳೆ ನ್ಯೂಸ್

ಮೇ 8ರಂದು ಕಾಂಗ್ರೆಸ್ ಮತಯಾಚನೆ ರ‍್ಯಾಲಿಯು ಪುತ್ತೂರಿನ ಬೊಳುವಾರಿನಿಂದ ದರ್ಬೆ ತನಕ ನಡೆಯಲಿದ್ದು, ನಟಿ ರಮ್ಯಾ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ರು.


ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 5ಸಾವಿರ ಮೇಲ್ಪಟ್ಟು ಮನೆ ಮನೆ ಭೇಟಿ ಕಾರ್ಯಕ್ರಮ, ‘ನನ್ನ ಬೂತ್ ನಾನು ಅಭ್ಯರ್ಥಿ’ ಕಾರ್ಯಕ್ರಮ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ನಾವು ಬಹುಮತದಿಂದ ಗೆದ್ದು ಬರುವ ಆತ್ಮವಿಶ್ವಾಸವಿದೆ. ರ‍್ಯಾಲಿಯಲ್ಲಿ ಸುಮಾರು 25ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮೇ 7ರಂದು ವಿಟ್ಲ, ಉಪ್ಪಿನಂಗಡಿಯಲ್ಲೂ ರ‍್ಯಾಲಿ ನಡೆಯಲಿದೆ ಎಂದ್ರು,. ಈ ವೇಳೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ತಕ್ಷ ಭಾಸ್ಕರ್ ರೈ ಕೋಡಿಂಬಾಳ, ವಕ್ತಾರ ಅಮಳ ರಾಮಚಂದ್ರ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.