ಬೆಂಗಳೂರು: ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ತೀರ್ಪು ಹೊರಬಿದ್ದಿದ್ದು, 9 ಆರೋಪಿಗಳನ್ನು ಬಿಡುಗಡೆ ಮಾಡಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ 3ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ.
2000 ರ ಜುಲೈ 30ರಂದು ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಸುಮಾರು 108 ದಿನ ಅವರನ್ನು ಬಂಧಿಸಿಟ್ಟಿದ್ದ. ತತ್ಸಬಂಧ ವೀರಪ್ಪನ್, ಆತನ ಪತ್ನಿ ಸೇರಿ ಸುಮಾರು 25 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಅದರಲ್ಲಿ 13 ಜನರು ಜೈಲಿನಲ್ಲಿದ್ದರು. ಆ 13 ಜನರಲ್ಲಿ ನಾಲ್ವರು ಮೃತಪಟ್ಟಿದ್ದು ಉಳಿದ 9 ಜನರನ್ನು ಬರೋಬ್ಬರಿ 18 ವರ್ಷಗಳ ಬಳಿಕ ನ್ಯಾಯಾಲಯ ಬಿಡುಗಡೆ ಮಾಡಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಕೆಲವರ ವಿರುದ್ಧ ಸರಿಯಾದ ಸಾಕ್ಷ್ಯವಿಲ್ಲದೆ 2012ರಲ್ಲೇ ಅವರನ್ನೆಲ್ಲ ವಿಚಾರಣೆ ಮುಕ್ತಗೊಳಿಸಲಾಗಿತ್ತು