Friday, January 24, 2025
ದಕ್ಷಿಣ ಕನ್ನಡರಾಜಕೀಯಸುದ್ದಿ

ಕಾರ್ಕಳದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ : ಭಜರಂಗಿ ಭಜರಂಗಿ ಜೈ ಜೈ ಭಜರಂಗಿ ಹರ್ಷೋದ್ಘಾರ – ಕಹಳೆ ನ್ಯೂಸ್

ಕಾರ್ಕಳ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಕಾರ್ಕಳಕ್ಕೆ ಆಗಮಿಸಿದ್ದು, ಕೇಸರಿ ಪಡೆಯಿಂದ ಭರ್ಜರಿ ಸ್ವಾಗತ ಸಿಕ್ಕಿದಿದೆ. ಕಾರ್ಕಳ ಅನಂತಶಯನ ವೃತ್ತದಿಂದ ಶ್ರೀ ವೆಂಕಟರಮಣ ದೇವಳ ಪರಿಸರದವರೆಗೆ ಯೋಗಿಜಿ ಅವರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ್ದು, ಸಾವಿರಾರೂ ಕಾರ್ಯಕರ್ತರು ಭಾಗಿಯಾಗಿ ರಸ್ತೆಯೆಲ್ಲ ಕೇಸರಿ ಮಯವಾಗಿತ್ತು.

ಇನ್ನು ಯೋಗಿ ಆದಿತ್ಯನಾಥ್ ಅವರು ಭಾಷಣವನ್ನ ಆರಂಬಿಸುತ್ತಾ ಭಜರಂಗಿ ಭಜರಂಗಿ ಎನ್ನುತ್ತಿದ್ದಂತೆ ಜನ ಜೈ ಜೈ ಭಜರಂಗಿ ಎಂದು ಜೈ ಘೋಷಣೆ ಕೂಗಿದ್ದಾರೆ. ಇನ್ನು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರ ಹೆಸರನ್ನ ಯೋಗಿ ಆದಿತ್ಯನಾಥ್ ಅವರು ಹೇಳುತ್ತಿದ್ದಂತೆ ಜನ ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಕಾರ್ಕಳದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆದಿದ್ದು ಸಾವಿರಾರೂ ಹಿಂದೂ ಕಾರ್ಯಕರ್ತರು ಭಾಗಿಯಾಗಿ ಬಿಜೆಪಿ ಗೆಲುವಿನ ಭರವಸೆಯನ್ನ ಮೂಡಿಸಿದ್ದಾರೆ.