Friday, January 24, 2025
ರಾಜಕೀಯರಾಜ್ಯಸುದ್ದಿ

ಮನೆಯಿಂದ ಮತದಾನಕ್ಕೆ ಇಂದು ಕೊನೆ ದಿನ; ಯಶಸ್ವಿ ವ್ಯವಸ್ಥೆಯಡಿ ಶೇ.92ರಷ್ಟು ಮತದಾನ – ಕಹಳೆ ನ್ಯೂಸ್

ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ ಸಂಬ0ಧ ಚುನಾವಣಾಧಿಕಾರಿಗಳು ನೀಡಿದ್ದ ಮನೆಯಿಂದ ಮತದಾನದ ಅವಕಾಶ ಇಂದು ಮುಕ್ತಾಯಗೊಳ್ಳಲಿದೆ. ಈ ವಿನೂತನ ವ್ಯವಸ್ಥೆಯಡಿ 80 ವರ್ಷ ಮೇಲ್ಪಟ್ಟವರಿಂದ ಶೇಕಡಾ 91.89ರಷ್ಟು ಮತದಾನ ಮತ್ತು ಅಂಗವಿಕಲರಿ0ದ ಶೇಕಡಾ 93.7ರಷ್ಟು ಮತದಾನ ಆಗಿದ್ದು, ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನೆ ದೊರೆತಿದೆ.

ಕರ್ನಾಟಕ ಚುನಾವಣೆ ಸಂಬ0ಧ ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರು ತಮ್ಮ ಮನೆಗಳಿಂದಲೇ ಮತದಾನ ಮಾಡುವಂತೆ ಅವಕಾಶ ಕಲ್ಪಿಸಲಾಗಿದೆ. ಇದು ಏಪ್ರಿಲ್ 29ರಿಂದ ಆರಂಭವಾಗಿ ಇಂದು ಶನಿವಾರ (ಮೇ 6ಕ್ಕೆ) ಸಂಜೆ 6ಗಂಟೆಗೆ ಪೂರ್ಣಗೊಳ್ಳಲಿದೆ. ಚುನಾವಣಾಧಿಕಾರಿಗಳು ಮನೆಯಿಂದ ಮತದಾನ ಮೊದಲೇ ಪ್ರಯತ್ನವೇ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣಾ ಆಯೋಗದ ಪ್ರಕಾರ, ಗುರುವಾರ ಮೇ 4ರವರೆಗೆ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರ ಪೈಕಿ ಶೇ 92ರಷ್ಟು ಮಂದಿ ಮತದಾನ ಮಾಡಿದ್ದಾರೆ. ಮನೆಯಿಂದಲೇ ಮತದಾನ ಮಾಡುವುದಕ್ಕಾಗಿ 80 ವರ್ಷ ಮೇಲ್ಪಟ್ಟ ಒಟ್ಟು 80,250 ಮಂದಿ ಹಾಗೂ 19,279 ಮಂದಿ ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊAಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

73,743 ಮಂದಿ ವೃದ್ಧರು-17,943 ವಿಶೇಷ ಚೇತನರಿಂದ ಮತದಾನ ಮಾಡಲಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊದಲು ದಿನವೇ ಮನೆಯಿಂದಲೇ ಮತದಾನ ಮಾಡುವವರ ಮನೆಗೆ ತೆರಳಿದ್ದರು. ಹಿರಿಯ ಜೀವಗಳಿಗೆ ಮತ್ತು ವಿಶೇಷ ಚೇತನರಿಗೆ ಬ್ಯಾಲೆಟ್ ಪೇಪರ್ ನೀಡಿ ಮತ ಪಡೆದುಕೊಂಡು ವಾಪಸಾಗುವ ಪ್ರಕ್ರಿಯೆ ನಡೆದಿದೆ.

ಇದುವರೆಗೆ 80 ವರ್ಷ ಮೇಲ್ಪಟ್ಟ ನೋಂದಾಯಿತ 80,250 ಮಂದಿಯಲ್ಲಿ ಒಟ್ಟು 73,743 ಮಂದಿ ಮತದಾನ ಹಕ್ಕು ಚಲಾಯಿಸಿದ್ದಾರೆ. ಇದರೊಂದಿಗೆ ಶೇ 91.89ರಷ್ಟು ಜನ ಮತದಾನ ಮಾಡಿದಂತಾಗಿದೆ. ಅದೇ ರೀತಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊAಡಿದ್ದ 19,279 ಅಂಗವಿಕಲರ ಗುರುವಾರದವರೆಗೆ (ಮೇ 4) 17,943 ಮಂದಿ ಮತ ಚಲಾಯಿಸಿದ್ದು, ಅವರಿಂದ ಒಟ್ಟು ಶೇಕಡಾ 93.7ರಷ್ಟು ಮತದಾನ ಆಗಿದೆ.

ಒಟ್ಟು ನೋಂದಾಯಿತರು ಹಾಗೂ ಇದುವರೆಗೆ ಮತ ಹಾಕಿದ ಎರಡು ವರ್ಗದವರ ಪೈಕಿ ಒಟ್ಟಾರೆಯಾಗಿ ಶೇಕಡಾ 92.12ರಷ್ಟು ಮತದಾನ ಆಗಿದೆ. ಮೆನನೆಯಿಂದಲೇ ಮತದಾನದ ಮೂಲಕ ಪಡೆಯಲಾಗಿರುವ ಮತಗಳನ್ನು ಸ್ಟ್ರಾಂಗ್ ರೂಮ್‌ಗಳಲ್ಲಿ ಭದ್ರವಾಗಿ ಇಡಲಾಗಿದೆ. ಮೇ 13ರಂದು ಶನಿವಾರ ಮತ ಎಣಿಕೆ ದಿನ ಅವುಗಳನ್ನು ಹೊರತೆಗೆದು ಎಣಿಕೆ ಮಾಡಲಾಗುವುದು ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.

ಚುನಾವಣೆ ಆಯೋಗವ ಮನೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮತದಾರರ ನೋಂದಣಿಗೆ ಅವಕಾಸ ನೀಡಿತ್ತು. ಅದಾದ ಬಳಿಕ ಏಪ್ರಿಲ್ 29ರಿಂದ ನೋಂದಾಯಿತ ಮತದಾರರ ಮನೆ ಮನೆಗೆ ತೆರಳಿ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಚುನಾವಣಾಧಿಕಾರಿಗಳ ಈ ಹೊಸ ಪ್ರಯತ್ನಕ್ಕೆ ರಾಜ್ಯದ ಹಿರಿಯ ನಾಗರಿಕರು ಶ್ಲಾಘಿಸಿದ್ದಾರೆ.

ಹಿರಿಯ ಜೀವಗಳು ಮತ್ತು ವಿಶೇಷ ಚೇತನರು ಮತದಾನ ಮಾಡುವಾಗ ಆ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗಿದೆ. ಇಂದು ಸಹ ಸಂಜೆ 6 ಗಂಟೆವರೆಗೆ ಮನೆಯಿಂದ ಮತದಾನದಕ್ಕೆ ಅವಕಾಶ ಇರಲಿದೆ. ಇನ್ನಷ್ಟು ಮಂದಿ ಮತದಾನ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದೆ.