Monday, November 25, 2024
ಸುದ್ದಿ

ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್ ‘ಧ್ರುವ್’ ಹಾರಾಟ ಸ್ಥಗಿತ ; ಭಾರತೀಯ ಸೇನೆಯ ನಿರ್ಧಾರ –ಕಹಳೆ ನ್ಯೂಸ್

ಭಾರತೀಯ ಸೇನೆಯು ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಹೆಚ್) ‘ಧ್ರುವ್’ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಧ್ರುವ್ ಹೆಲಿಕಾಪ್ಟರ್ ಪತನವಾಗಿತ್ತು. ಅಪಘಾತದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಭಾನುವಾರ ಕೇರಳದ ಕೊಚ್ಚಿಯಲ್ಲಿ ಪೈಲಟ್ ತರಬೇತಿಯಲ್ಲಿದ್ದ ವೇಳೆ ಬಲವಂತದ ಲ್ಯಾಂಡಿ0ಗ್ ಮಾಡಬೇಕಾಗಿ ಬಂದಿತ್ತು. ಈ ಬೆಳವಣಿಗೆ ಕಾರಣದಿಂದಾಗಿ ರಕ್ಷಣಾ ಸಚಿವಾಲಯವು 191 ಧ್ರುವ್ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆಯನ್ನು 1 ತಿಂಗಳ ಕಾಲ ನಿಲ್ಲಿಸಲು ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ನಲ್ಲಿ ನಡೆದ ಎರಡು ಅಪಘಾತಗಳ ನಂತರ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಗಳು ಇತ್ತೀಚೆಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಹೆಲಿಕಾಪ್ಟರ್ ಮತ್ತೆ ಬಳಕೆ ಮಾಡಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಎಲ್‌ಹೆಚ್ ನ ಹೆಲಿಕಾಪ್ಟರ್‌ಗಳನ್ನು ಭಾರತೀಯ ಕೋಸ್ಟ್ ಗಾರ್ಡ್ನೊಂದಿಗೆ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಎಲ್ಲಾ ಮೂರು ರಕ್ಷಣಾ ಪಡೆಗಳು ಹಾರಿಸುತ್ತವೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಧ್ರುವ್ ಹೆಲಿಕಾಪ್ಟರ್‌ಗಳು ಮತ್ತೆ ಕಾರ್ಯಾಚರಣೆಯಲ್ಲಿವೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ

ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಭಾರತೀಯ ಸೈನ್ಯ ಬಳಕೆ ಮಾಡುತ್ತಿದ್ದು, ಸಿಯಾಚಿನ್ ಹಿಮನದಿ ಮತ್ತು ಲಡಾಖ್‌ನಲ್ಲಿ ಸೈನಿಕರಿಗೆ ಸೇವೆ ಸಲ್ಲಿಸಲು ಉಪಯುಕ್ತಕಾರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಹೆಲಿಕಾಪ್ಟರ್ ಯಾಂತ್ರಿಕ ದೋಷಗಳು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡುತ್ತಿದೆ.