Friday, January 24, 2025
ಸುದ್ದಿ

ಶ್ರೀನಿವಾಸ ಮೂರ್ತಿ ಅವರ ಸರ್ಕಾರಿ ನೌಕರಿ ಕೈತಪ್ಪಿಸಿದರಂತೆ ದೇವೆಗೌಡ್ರು ; ಬಹು ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ಹಿರಿಯ ನಟ –ಕಹಳೆ ನ್ಯೂಸ್

ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಜನರಿಂದ ಸೈ ಎನಿಸಿಕೊಂಡಿದ್ದವರು. ಪೋಷಕ ಪಾತ್ರಗಳಿಗೆ ಜೀವ ತುಂಬುವ ಅವರು ಮೊದಲು ರಾಜಕೀಯ ಪ್ರವೇಶಿಸಿದ್ದನ್ನು ತಿಳಿಸಿದ್ದಾರೆ.

ತಮ್ಮ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದು, ನಟನೆಗೂ ಮುನ್ನ ಶ್ರೀನಿವಾಸ್ ಮೂರ್ತಿ ಸರ್ಕಾರಿ ನೌಕರಿಯಲ್ಲಿದ್ದರಂತೆ. ಅದನ್ನು ಬಿಡುವುದಕ್ಕೆ ದೇವೇಗೌಡ ಅವರೇ ಕಾರಣ. ಈ ಬಗ್ಗೆ ಶ್ರೀನಿವಾಸ ಮೂರ್ತಿ ವಿವರಿಸಿದ್ದಾರೆ. “ಆಗ ನಾನು ಸರ್ವೇ ಇಲಾಖೆಯಲ್ಲಿ ಕೆಲಸದಲ್ಲಿದ್ದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವೇಗೌಡರು ರಾಜೀನಾಮೆ ಕೊಡಿಸಿ ದೊಡ್ಡಬಳ್ಳಾಪುರದ ಎಂಎಲ್ಸಿಗೆ ನಿಲ್ಲಿಸಿದ್ದರು. ಆದರೆ ಆ ಚುನಾವಣೆಯಲ್ಲಿ ನಾನು ಸೋತಿದ್ದೆ. ನಮ್ಮ ಜಾತಿಯವರೆಲ್ಲ ನಮಗೆ ವೋಟು ಮಾಡುತ್ತಾರೆ ಎಂದುಕೊ0ಡಿದ್ದರು. ಆದರೆ ಅಲ್ಲಿ ಇದ್ದದ್ದೆಲ್ಲಾ ನೇಕಾರರು” ಎಂದಿದ್ದಾರೆ.

“ನನ್ನ ಎದುರಾಳಿ ಆರ್.ಎಲ್.ಜಾಲಪ್ಪ ಅವರ ಬಗ್ಗೆ ಗೊತ್ತಿರಲಿಲ್ಲ. ಅವರು ಅದಾಗಲೇ ನೇಕಾರರಿಗೆ ಸಹಾಯ ಮಾಡಿದ್ದರಿಂದ ಅವರ ಮೇಲೆ ಒಲವಿತ್ತು. ವೋಟು ಕೇಳಲು ಹೋದಾಗ ನೀವ್ಯಾಕ್ರೀ ನಿಂತುಕೊ0ಡ್ರಿ. ನಾವೂ ಜಾಲಪ್ಪ ಅವರಿಗೆ ವೋಟ್ ಹಾಕೋದು. ಬನ್ನಿ ಕಾಫಿ ಕುಡಿರಿ ಅಂತ ಹೇಳ್ತಾ ಇದ್ರು” ಎಂದು ಆ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.