Friday, January 24, 2025
ಸುದ್ದಿ

ಕ್ಷೇತ್ರದ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದವರಲ್ಲಿ ಶಾಸಕ ವೇದವ್ಯಾಸ ಕಾಮತರು ಅಗ್ರಗಣ್ಯರು:- ಕಹಳೆ ನ್ಯೂಸ್

ಮಂಗಳೂರು ಸದ್ಯ ಸ್ಮಾರ್ಟ್ ಸಿಟಿ ಹೆಸರಿಗೆ ತಕ್ಕಂತೆ ಬೆಳೆದು ಕ್ರೀಡಾ ಚಟುವಟಿಕೆಗಳ ಬಳಕೆಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದು ದ.ಕ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಪುರುಷೋತ್ತಮ ಪೂಜಾರಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು


ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳ ಕ್ರೀಡಾಂಗಣದ ಕಾಮಗಾರಿಯು ಕೇವಲ 2 ವರ್ಷದ ಅವಧಿಯಲ್ಲಿ ಮುಗಿದು ಕ್ರೀಡಾಪಟುಗಳ ಮರು ಉಪಯೋಗಕ್ಕೆ ಲಭ್ಯವಾಗಿದೆ. ಪಕ್ಕದಲ್ಲಿ ಇರುವ ಮಹಿಳಾ ಕ್ರೀಡಾ ಹಾಸ್ಟೆಲ್ ಮೇಲ್ದರ್ಜೆಗೆ ಏರಿಸಿದ್ದರಿಂದ ಹೆಣ್ಣುಮಕ್ಕಳಿಗೆ ಹೆಚ್ಚು ಉಪಯೋಗವಾಗಿದೆ.
ಒಂದು ಎಕರೆ 30 ಸೆನ್ಸ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋಟ್ ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವೇದವ್ಯಾಸ ಕಾಮತ್ ಅವರು. ಇಲ್ಲಿ ಕರ್ನಾಟಕದ ಬೇರೆಲ್ಲಿಯೂ ಇರದಂತಹ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ. ಇದರಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆದು ಆದಾಯಕ್ಕೂ ದಾರಿ ಮಾಡಿಕೊಡಲಾಗುತ್ತಿದೆ.
ಇವೆಲ್ಲ ಕಾರಣಗಳಿಂದ ಬೆಂಗಳೂರಿನಿAದ ಬಂದ ತಂಡದಿAದಲೂ ಇದು “ಕರ್ನಾಟಕದಲ್ಲಿಯೇ ಅತ್ಯುತ್ತಮ ಯೋಜನೆಗಳಲ್ಲೊಂದು” ಎಂಬ ಪ್ರಶಂಸನೆಗೆ ಒಳಪಟ್ಟಿದೆ.
ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ ಮೂರು ದಶಕಗಳ ಅಂತರಾಷ್ಟ್ರೀಯ ಮಟ್ಟದ ಈಜು ಕೊಳದ ಕನಸು ಎಮ್ಮೆಕೆರೆಯ ಯೋಜನೆಯಿಂದ ಇದೀಗ ವೇಗ ಪಡೆದು ಸಾಕಾರಗೊಳ್ಳುತ್ತಿದೆ. ಮಂಗಳೂರಿನ ಪುರಭವನ ಹಿಂದೆ ಕುಸ್ತಿ ಹಾಗೂ ಕಬಡ್ಡಿಗೆ ಅಂತರಾಷ್ಟ್ರೀಯ ಮಾದರಿಯಲ್ಲಿ ನೀಲನಕ್ಷೆ ತಯಾರಾಗಿದ್ದು ಆಟದ ಮೈದಾನದ ಕೊರತೆ, ಸೂಕ್ತ ದೈಹಿಕ ಶಿಕ್ಷಕರ ಕೊರತೆ ಇರುವಲ್ಲಿನ ಕ್ರೀಡಾಸಕ್ತ ಅಭ್ಯರ್ಥಿಗಳಿಗೂ ಸಹ ಭವಿಷ್ಯದಲ್ಲಿ ಇದೊಂದು ಅದ್ಭುತ ವೇದಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕ್ಷೇತ್ರದ ಕ್ರೀಡಾಪಟುಗಳಿಗೆ ರಾಜ್ಯ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೈಯಕ್ತಿಕ ನೆಲೆಯಲ್ಲಿ,,ಮಹಾನಗರ ಪಾಲಿಕೆ ವ್ಯಾಪ್ತಿಯ ಅನುದಾನ ಕೊಡಿಸುವ ಮೂಲಕ ಹಾಗೂ ಇನ್ನಿತರ ಮೂಲಗಳಿಂದ ಅಗತ್ಯ ಬಿದ್ದಾಗೆಲ್ಲಾ ಪ್ರೋತ್ರಾಹ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕ್ರೀಡಾಪಟುಗಳಿಗೆ ಸಹಾಯ ಮಾಡಿದ್ದಾರೆ
ಈಗಿನ ಶಾಸಕರು ಸ್ವತಃ ಕ್ರೀಡಾಪಟು ಆಗಿದ್ದರಿಂದಲೇ ಕ್ರೀಡೆಗೆ ಇಷ್ಟೆಲ್ಲಾ ಸಹಕಾರ ನೀಡಲು ಸಾಧ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭವಿಷ್ಯದಲ್ಲಿ ಸ್ಕೇಟಿಂಗ್ ಪಟುಗಳಿಗೆ ಸುಸಜ್ಜಿತ ವ್ಯವಸ್ಥೆ, ಫುಟ್ಬಾಲ್ ಕ್ಷೇತ್ರದ ಸಂತೋಷ್ ಟ್ರೋಫಿ, ಡುರಾಂಡ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ನಮ್ಮ ಮಂಗಳೂರಿನಲ್ಲಿ ನಡೆಯುವಂತಾಗಬೇಕು. ಅದಕ್ಕೆ ನಮ್ಮಲ್ಲಿನ ಸೌಲಭ್ಯಗಳು ಬೆಳೆಯಬೇಕು ಮತ್ತು ಕಾರ್ಯ ವೇಗ ಹೆಚ್ಚಬೇಕು. ಈಗಿನ ಶಾಸಕ ವೇದವ್ಯಾಸ ಕಾಮತರು ಆ ವೇಗಕ್ಕೆ ಸರಿಯಾಗಿ ಹೊಂದುವ ವ್ಯಕ್ತಿಯಾಗಿದ್ದಾರೆ, ಮತ್ತು ಮತ್ತೊಮ್ಮೆ ಅವರು ಶಾಸಕರಾಗಿ ಆಯ್ಕೆಯಾಗಿ ಬರಲೆಂಬುದು ನಮ್ಮೆಲ್ಲ ಕ್ರೀಡಾಪಟುಗಳ ಹಾರೈಕೆ” ಎಂದು ನುಡಿದರು
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕುಸ್ತಿ ಅಸೋಸಿಯೇಷನ್ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಜಯ ಪುತ್ರನ್, ಹಾಗೂ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಮೋನಪ್ಪ ಕುಳಾಯಿ ಉಪಸ್ಥಿತರಿದ್ದರು.