‘ದಿ ಕೇರಳ ಸ್ಟೋರಿ’ ಚಿತ್ರ ಎಚ್ಚರಿಕೆಯ ಕರೆ ಗಂಟೆ ಸಮಾಜಕ್ಕೆ ನೀಡಿದೆ : ಪ್ರತಿಯೊಂದು ಹೆಣ್ಣು ಮಗಳು ಕುಟುಂಬ ಈ ಸಮೇತ ಚಿತ್ರ ನೋಡಬೇಕಿದೆ – ಕಹಳೆ ನ್ಯೂಸ್
‘ದಿ ಕೇರಳ ಸ್ಟೋರಿ’ ಚಲನ ಚಿತ್ರವನ್ನು ಪ್ರತಿಯೊಂದು ಹೆಣ್ಣೂ ಮಗಳು ಕುಟುಂಬ ಸಮೇತ ನೋಡ ಬೇಕಿದೆ ಎಂದು ಆರ್ ಎಸ್ ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ರಾತ್ರಿ ಧರ್ಮಪತ್ನಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದ್ದಾರೆ.
‘ದಿ ಕೇರಳ ಸ್ಟೋರಿ’ ಇದು ಚಿತ್ರವಲ್ಲ ದಿನಾ ನಡೆಯುತ್ತಿರುವ ವಾಸ್ತಾವಂಶವಾಗಿದ್ದು ದಿ ಕೇರಳ ಸ್ಟೋರಿ ಚಿತ್ರ ಎಚ್ಚರಿಕೆಯ ಕರೆ ಗಂಟೆಯನ್ನು ಸಮಾಜಕ್ಕೆ ನೀಡಿದೆ. ಚಿತ್ರ ನೈಜವಾಗಿ ಮೂಡಿ ಬಂದಿದೆ. ಈ ಹಿಂದೆ ಕಾಶ್ಮೀರಿ ಫೈಲ್ಸ್ ಚಿತ್ರ ಕೂಡ ಅತ್ಯುತ್ತಮವಾಗಿ ಮೂಡಿ ಬಂದಿತ್ತು. ಈ ಚಿತ್ರವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ಕುಟುಂಬದ ಜೊತೆಗೆ ನೋಡಬೇಕು. ಅವರ ಅತೀ ಮತೀಯವಾದ ಮತ್ತು ನಮ್ಮ ಮಕ್ಕಳಿಗೆ ಧರ್ಮದ ತಿಳುವಳಿಕೆ ಇಲ್ಲದಿರೋದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಈ ರೀತಿಯ ಅನ್ಯಾಯವನ್ನು ಜಗತ್ತೇ ಒಪ್ಪಬಾರದು ಮತ್ತು ಹೆಣ್ಣು ಮಗಳಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು ಎಂದರು. ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಮತಾಂತರ ಆಗಿದೆ. ಮತಾಂತರ ಆದ ಬಳಿಕ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಲಾಗಿದೆ. ಕಾಂಗ್ರೆಸ್ ಕಮ್ಯುನಿಸ್ಟ್ ಜನತಾದಳ ಈ ಅನ್ಯಾಯಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಆರೋಪಿಸಿದ ಭಟ್ ಈ ಚಿತ್ರ ನೋಡಿ ಹೆಣ್ಣು ಮಕ್ಕಳು ಯೋಚನೆ ಮಾಡಬೇಕು ಜೊತೆಗೆ ತಂದೆ-ತಾಯಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಬೇಕು.ಹೆಚ್ಚು ಕಲಿಯೋಕೆ ಬೇರೆ ಊರಿಗೆ ಕಳುಹಿಸೋವಾಗ ಅತೀ ಎಚ್ಚರಿಕೆಯಿಂದ ಇರಬೇಕು.
ಮತಾಂತರ ನಿಷೇಧ ಕಾಯಿದೆಯನ್ನು ಬಿಜೆಪಿ ತಂದಿದೆ ಆದ್ರೆ ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯಿದೆ ವಾಪಸ್ ತೆಗೆದುಕೊಳ್ಳೊದಾಗಿ ಹೇಳಿದೆ. ಕಾಂಗ್ರೆಸ್ ಅಧಿಕಾರ ಬಂದಾಗ ಹೆಣ್ಣು ಮಕ್ಕಳು ನೋವು ಅನುಭವಿಸುತ್ತಾರೆ ಅನ್ನೋದು ಅವರ ಮಾತಿನಲ್ಲಿ ಸಾಬೀತಾಗಿದೆ. ರಾಜೀವ್ ಗಾಂಧಿ ಸರ್ಕಾರ ಅತ್ಯಾಚಾರ ಮಾಡುವ ಗಂಡುಮಕ್ಕಳಿಗೆ ಪ್ರೇರಣೆ ನೀಡಿದೆ. ಚುನಾವಣಾ ಸಂಧರ್ಭದಲ್ಲಿ ಜನ ಎಚ್ಚೆತ್ತು ಕಾಂಗ್ರೆಸ್‌ನ್ನು ದೂರ ಇಡಬೇಕು. ಅವರ ಸಂಖ್ಯೆ ಹೆಚ್ಚಾಗಿ ಮತ್ತೊಂದು ಪಾಕಿಸ್ಥಾನ ಮಾಡಲು ಮುಂದಾಗಿದೆ. ಕೇರಳದಲ್ಲಿ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.ಪಿಣರಾಯಿ ಮಕ್ಕಳ ಕಥೆಯೇನು ಎಂಬುದನ್ನು ಯೋಚನೆ ಮಾಡಬೇಕಿದೆ. ತನ್ನ ಹೆಂಡತಿ ಮಕ್ಕಳು ಹಿಂದೂಗಳಾಗಿ ಉಳಿಯಲಿ ಎಂದು ಯೋಜನೆ ಮಾಡಲಿ.
ಲವ್ ಜಿಹಾದ್ ನಲ್ಲಿ ಏನಾಗುತ್ತದೆ ಎಂಬುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೆಣ್ಣು ಮಕ್ಕಳು ನಮಗೆ ದೇವಿ ತಾಯಿಯ ರೀತಿಯಾಗಿದ್ದು, ಸರ್ಕಾರ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಎಂದು ಹೇಳಿದರು.