Saturday, January 18, 2025
ದಕ್ಷಿಣ ಕನ್ನಡರಾಜ್ಯಸಿನಿಮಾಸುದ್ದಿ

ದಿ ಕೇರಳ ಸ್ಟೋರಿ ಚಿತ್ರವನ್ನು ಪ್ರತಿಯೊಂದು ಹೆಣ್ಣು ಮಕ್ಕಳು ನೋಡಬೇಕು – ಡಾ. ಕಲ್ಲಡ್ಕ ಪ್ರಭಾಕರ್ ಭಟ್‌ – ಕಹಳೆ ನ್ಯೂಸ್

ಮಂಗಳೂರು ಮೇ 07 :’ ದಿ ಕೇರಳ ಸ್ಟೋರಿ’ ಚಲನ ಚಿತ್ರವನ್ನು ಪ್ರತಿಯೊಂದು ಹೆಣ್ಣೂ ಮಗಳು ಕುಟುಂಬ ಸಮೇತ ನೋಡ ಬೇಕಿದೆ. ಇದು ಚಿತ್ರವಲ್ಲ ದಿನಾ ನಡೆಯುತ್ತಿರುವ ವಾಸ್ತಾವಂಶವಾಗಿದ್ದು ದಿ ಕೇರಳ ಸ್ಟೋರಿ ಚಿತ್ರ ಎಚ್ಚರಿಕೆಯ ಕರೆ ಗಂಟೆಯನ್ನು ಸಮಾಜಕ್ಕೆ ನೀಡಿದೆ ಎಂದು ಆರ್ ಎಸ್‌ ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯಪಟ್ಟಿದ್ದಾರೆ.


ಮಂಗಳೂರು ನಗರದಲ್ಲಿ ಶನಿವಾರ ರಾತ್ರಿ ಧರ್ಮಪತ್ನಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ದಿ ಕೇರಳ ಸ್ಟೋರಿ‌ ಚಿತ್ರ ವೀಕ್ಷಿಸಿದ ಸುದ್ದಿಗಾರರೊಂದಿಗೆ ಮಾತನಾಡಿರು. ಈ ಚಿತ್ರವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ಕುಟುಂಬದ ಜೊತೆಗೆ ನೋಡಬೇಕು. ಅವರ ಅತೀ ಮತೀಯವಾದ ಮತ್ತು ನಮ್ಮ ಮಕ್ಕಳಿಗೆ ಧರ್ಮದ ತಿಳುವಳಿಕೆ ಇಲ್ಲದಿರೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ರೀತಿಯ ಅನ್ಯಾಯವನ್ನು ಜಗತ್ತೇ ಒಪ್ಪಬಾರದು ಮತ್ತು ಹೆಣ್ಣು ಮಗಳ‌ಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಕಮ್ಯುನಿಸ್ಟ್ ಜನತಾದಳ ಈ ಅನ್ಯಾಯಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಆರೋಪಿಸಿದ ಭಟ್ ಈ ಚಿತ್ರ ನೋಡಿ ಹೆಣ್ಣು ಮಕ್ಕಳು ಯೋಚನೆ ಮಾಡಬೇಕು ಜೊತೆಗೆ ತಂದೆ-ತಾಯಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಬೇಕು.
ಹೆಚ್ಚು ಕಲಿಯೋಕೆ ಬೇರೆ ಊರಿಗೆ ಕಳುಹಿಸೋವಾಗ ಅತೀ ಎಚ್ಚರಿಕೆಯಿಂದ ಇರಬೇಕು ಎಂದು ಅಭಿಪ್ರಾಯಪಟ್ಟರು

ಜಾಹೀರಾತು
ಜಾಹೀರಾತು
ಜಾಹೀರಾತು