Thursday, December 5, 2024
ಸುದ್ದಿ

ಚರಂಡಿ ನೀರಿನಲ್ಲಿ ಕಂತೆ ಕಂತೆ ಹಣ ಪತ್ತೆ..! ಗೊಜ್ಜೆಯನ್ನೇ ಕೆದಕಿ ಹಣ ಬಾಚಿಕೊಂಡ ಜನ..! – ಕಹಳೆ ನ್ಯೂಸ್

ಕರೆನ್ಸಿ ನೋಟುಗಳ ಕಟ್ಟುಗಳನ್ನು ದೊಡ್ಡ ಪ್ರಮಾಣದಲ್ಲಿ ಚರಂಡಿಗೆ ಸುರಿದರೆ ನೀವೇನು ಮಾಡುತ್ತೀರಿ? ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಪಟ್ಟಣದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಅಲ್ಲಿ ಮೊರಾದಾಬಾದ್ ಗ್ರಾಮದ ಚರಂಡಿಯಿಂದ ಹಲವಾರು ಜನರು ಕರೆನ್ಸಿ ನೋಟುಗಳನ್ನು ಹೊರತೆಗೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಧಾನಿ ಪಾಟ್ನಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ಸಸಾರಾಮ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಚರಂಡಿಗೆ ಇಳಿದು 2,000, 500, 100 ಮತ್ತು 10 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದು.

ಮುಂಜಾನೆ ಚರಂಡಿಯೊಳಗೆ ಕರೆನ್ಸಿ ನೋಟುಗಳಿರುವ ಚೀಲಗಳನ್ನು ನೋಡಿದ್ದೇವೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ನೋಟುಗಳನ್ನು ಸಂಗ್ರಹಿಸತೊಡಗಿದರು. ನೋಟುಗಳು ಅಸಲಿ ಎಂದು ಕೂಡ ಹೇಳಿಕೊಂಡಿದ್ದಾರೆ.