Friday, November 22, 2024
ಸುದ್ದಿ

ನಕ್ಸಲ್ ಸಮರ್ಥಕರಾದ ಗಿರೀಶ್ ಕಾರ್ನಾಡ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ – ಕಹಳೆ ನ್ಯೂಸ್

ಮಂಗಳೂರು: ನಕ್ಸಲ್ ಸಮರ್ಥಕರಾದ ಸಾಹಿತಿ ಗಿರೀಶ್ ಕಾರ್ನಾಡ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಧಿಲ್‌ರವರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯ್ತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾನೂ ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ ಘಟನೆ ನಡೆದಿತ್ತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಹಿಂದೂಗಳಿಗೆ ಒಂದು ನ್ಯಾಯ ಮತ್ತು ನಕ್ಸಲವಾದಿಗಳ ಸಮರ್ಥಕರಿಗೆ ಮತ್ತೊಂದು ನ್ಯಾಯ ಹೀಗೇಕೆ? ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡಿರುವ ಕಾರಣ ಇವರೆಲ್ಲರ ಮೇಲೆಯೂ ಕಠಿಣ ಕ್ರಮ ಜರುಗಿಸುವ ಕಾನೂನು ರಚಿಸಬೇಕು ಮತ್ತು `ನಗರವಾಸಿ ನಕ್ಸಲವಾದಿ’ಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರವನ್ನು ನೀಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟರು. ಈ ವೇಳೆ ಚಂದ್ರ ಮೊಗೇರ, ರಾಜ್ ಕುಮಾರ್ ಶೇಟ್, ಸತೀಶ್ , ಲೋಕೇಶ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.