Sunday, November 24, 2024
ಸುದ್ದಿ

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಮೇಲೆ ಹಲ್ಲೆ : ಕೂದಲೆಳೆ ಅಂತರದಲ್ಲಿ ಮಂಡಲದ ಅಧ್ಯಕ್ಷರನ್ನು ಪಾರು ಮಾಡಿದ ಪುತ್ತೂರಿನ ಅಕ್ಷಯ್ ರೈ ದಂಬೆಕಾನ –ಕಹಳೆ ನ್ಯೂಸ್

ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಚಳ್ಳಕೆರೆ ಮಂಡಲದ ಅಧ್ಯಕ್ಷರಾದ ಸೂರೇನಹಳ್ಳಿ ಶ್ರೀನಿವಾಸ್ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದ್ದು, ಇವರನ್ನು ಕೂದಲೆಳೆ ಅಂತರದಲ್ಲಿ ಪುತ್ತೂರಿನ ಅಕ್ಷಯ್ ರೈ ದಂಬೆಕಾನ ಪಾರು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಈ ಹಿಂದೆ ಬಹಳ ಅಪಾಯಕಾರಿಯಾದ ಕ್ಷೇತ್ರವಾಗಿದ್ದು, ಇಲ್ಲಿ ರೌಡಿಸಂ ತಾಂಡವವಾಡುತ್ತಿದೆ. ಇಂತಹ ಕ್ಷೇತ್ರದಲ್ಲಿ ಪಕ್ಷದ ಜವಾಬ್ದಾರಿಯನ್ನು ಗುಜರಾತ್‌ನ ಚೀಫ್ ವಿಪ್ ಹಾಗೂ ಶಾಸಕರಾದ ಕೌಶಿಕ್ ಭಾಯ್ ಪ್ರಭಾರಿ ಅವರಿಗೆ ವಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೌಶಿಕ್ ಭಾಯ್ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಮಾಧ್ಯಮ ಇಂಚಾರ್ಜ್ ಅಕ್ಷಯ್ ರೈ ದಂಬೆಕಾನ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಕ್ಷೇತ್ರದಲ್ಲಿ ಮಂಡಲದ ಅಧ್ಯಕ್ಷರಾದ ಸೂರೆನಹಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಯಾದವ ಹಾಗೂ ಮಾದಿಗ ಸಮುದಾಯದವರೊಂದಿಗೆ ಬೃಹತ್ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕೇಂದ್ರ ಸಚಿವ ನಾರಾಯಣ ಸ್ವಾಮಿಯವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ರು. ಬಿಜೆಪಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನತೆ ಅಮೋಘ ಪೂರ್ವ ಬೆಂಬಲ ಸೂಚಿಸಿದ್ದಾರೆ. ಅದೇ ದಿನ ಸಂಜೆ ನಾಯಕ ನಟ ಕಿಚ್ಚ ಸುದೀಪ್‌ರವರು ಬಿಜೆಪಿ ಪಕ್ಷದ ಮತಯಾಚನೆಗೆ ಬರುವ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು ಆದ್ರೆ ಕಾರಣಾಂತರಗಳಿAದ ಈ ಕಾರ್ಯಕ್ರಮ ರದ್ದು ಮಾಡಿ, ಇದೇ ಕಾರ್ಯಕ್ರಮವನ್ನು ಇಂದು ಬೆಳಗ್ಗೆ ನಡೆಸುವುದಾಗಿ ಪಕ್ಷ ತೀರ್ಮಾನಿಸಿತ್ತು.

ಈ ಎಲ್ಲಾ ಬೆಳವಣಿಗೆಯಿಂದ ‘ಖಂಡಿತವಾಗಿಯೂ ಬಿಜೆಪಿ ಗೆಲ್ಲುತ್ತದೆ..’ ಎಂದು ಖಚಿತವಾಗಿ ಉಳಿದ ಎಲ್ಲಾ ಪಕ್ಷದ ಮುಖಂಡರಿಗೆ ಭಯ ಉಂಟಾಗಿದೆ. ಹಾಗಾಗಿ ನಿನ್ನೆ ರಾತ್ರಿ ವೇಳೆ ಕೆಲವು ಕಿಡಿಗೇಡಿಗಳು ಶ್ರೀನಿವಾಸ್ ಅವರ ಮೇಲೆ ದಾಳಿಯನ್ನು ನಡೆಸಲು ಯತ್ನಿಸಿದ್ದಾರೆ. ಇದೇ ವೇಳೆ ಬಿಜೆಪಿ ಯುವ ಮೋರ್ಚಾದ ಅಕ್ಷಯ್ ರೈ ದಾಂಬೆಕಾನರವರು ಅಧ್ಯಕ್ಷರ ಹಿಂಬದಿಯ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ರು. ಕೂಡಲೇ ಸಮಯ ಪ್ರಜ್ಞೆ ಮೆರೆದ ಅಕ್ಷಯ್ ಅಧ್ಯಕ್ಷ ಸೂರೇನಹಳ್ಳಿ ಶ್ರೀನಿವಾಸ್ ರವರನ್ನು ಕೂದಲೆಲೆ ಅಂತರದಲ್ಲಿ ಪಾರು ಮಾಡಿದ್ದಾರೆ.
ಇನ್ನೂ ಈ ಪ್ರಕರಣ ತುರನೂರು ಠಾಣೆಯಲ್ಲಿ ದಾಖಲಾಗಿದ್ದು, ಘಟನೆಯ ವಿರುದ್ಧ ಇಂದು ತುರನೂರು ಮತ್ತು ಚಳ್ಳಕೆರೆ ಪೇಟೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲು ಪಕ್ಷದ ಪ್ರಮುಖರು ನಿರ್ಧಾರಿಸಿದ್ದಾರೆ.