Friday, January 24, 2025
ಸುದ್ದಿ

ಬಂಟ್ವಾಳ ಕ್ಷೇತ್ರದಲ್ಲಿ 25 ಸಾವಿರಕ್ಕಿಂತಲೂ ಅಧಿಕ ಅಂತರದಲ್ಲಿ ರಾಜೇಶ್ ನಾಯ್ಕ್ ಗೆಲುವು ನಿಶ್ಚಿತ : ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ – ಕಹಳೆ ನ್ಯೂಸ್

ಬಂಟ್ವಾಳ ಬಂಟ್ವಾಳ: ಕ್ಷೇತ್ರದ ಪ್ರತಿ ಮನೆಯನ್ನು ಬಿಜೆಪಿ ಕಾರ್ಯಕರ್ತರು ಬೇಟಿ ಮಾಡಿದ್ದು, ಬಂಟ್ವಾಳ ಕ್ಷೇತ್ರದಲ್ಲಿ 25 ಸಾವಿರಕ್ಕಿಂತಲೂ ಅಧಿಕ ಅಂತರದಲ್ಲಿ ರಾಜೇಶ್ ನಾಯ್ಕ್ ಅವರ ಗೆಲುವು ನಿಶ್ಚಿತ , ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ 120 ಕ್ಕೂ ಅಧಿಕ ಸ್ಥಾನವನ್ನು ಪಡೆಯುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಸಿರೋಡಿಗೆ ಯೋಗಿ ಆಧಿತ್ಯನಾಥ್ ಅವರು ಆಗಮಿಸಿದ ವೇಳೆ ಸೇರಿದ ಕಾರ್ಯಕರ್ತರನ್ನು ನೋಡಿ ಕಾಂಗ್ರೆಸ್ ಸೋಲಿನ ಭೀತಿಯಿಂದ ಹತಾಶೆಯಿಂದ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ಕೈಕಾಲು ಹಿಡಿಯಲು ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ಮೂಲಕ ಕಾಂಗ್ರೇಸ್ ಪರವಾಗಿ ಹೇಳಿಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಈ ಬಾರಿ ಕಾಂಗ್ರೇಸ್ ನವರ ತಂತ್ರ,ಮAತ್ರಗಳು ಫಲಿಸುವುದಿಲ್ಲ,ಕ್ಷೇತ್ರದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳು ಹಾಗೂ ಶಾಂತಿಯ ಬಂಟ್ವಾಳವಾಗಿ ಮಾರ್ಪಾಡು ಮಾಡಿದ ರಾಜೇಶ್ ನಾಯ್ಕ್ ಗೆಲುವು ಸಾಧಿಸುವುದು ನೂರಕ್ಕೆ ನೂರು ಸತ್ಯ ಎಂದು ಅವರು ತಿಳಿಸಿದರು.

ಸುಳ್ಳು, ಅಪಪ್ರಚಾರ, ಮೋದಿಯನ್ನು ಬೈಯುವುದು ಈ ಮೂಲಕ ಅಧಿಕಾರ ಪಡೆಯುವುದು ಮಾತ್ರ ಕಾಂಗ್ರೇಸ್ ಅಜೆಂಡಾ, ಬಡತನ ಮುಕ್ತ ಭಾರತ, ಆತ್ಮನಿರ್ಭರ ಭಾರತ, ವಿಶ್ವಗುರು ಭಾರತ, ಅಭಿವೃದ್ಧಿ ಹಾಗೂ ಶಾಂತಿ ಬಿಜೆಪಿ ಅಜೆಂಡಾ ಅಗಿದೆ ಎಂದು ಅವರು ತಿಳಿಸಿದರು.

ಕ್ರಿಮಿನಲ್ ದಂದೆಯ ರಾಜಕಾರಣಿಗಳನ್ನು ರಾಜಕೀಯದಲ್ಲಿ ಪರಿಚಯಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕೆಲವು ಉದಾಹರಣೆಗಳ ಮೂಲಕ ಆರೋಪ ವ್ಯಕ್ತಪಡಿಸಿದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ , ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಪ್ರಮುಖ ಪುರುಷೋತ್ತಮ ಶೆಟ್ಟಿ ವಾಮದಪದವು , ಪ್ರಚಾರ ಸಮಿತಿ ಪ್ರಮುಖ್ ರಂಜಿತ್ ಮೈರ ಉಪಸ್ಥಿತರಿದ್ದರು.