Friday, January 24, 2025
ರಾಜಕೀಯ

ಕಾರ್ಕಳದಲ್ಲಿ ವಿ ಸುನೀಲ್ ಕುಮಾರ್ ಬಿರುಸಿನ ಮತಪ್ರಚಾರ : ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಿದ ಕಾರ್ಯಗಳನ್ನ ನೆನೆದು ಮತ್ತಷ್ಟು ಅಭಿವೃದ್ಧಿ ನಡೆಸಲು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ – ಕಹಳೆ ನ್ಯೂಸ್

ಕಾರ್ಕಳ :  ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಇಂದು ಕಾರ್ಕಳದಲ್ಲಿ ಬಿರುಸಿನ ಮತಪ್ರಚಾರ ನಡೆಸಿದ್ದು, ಬೆಳ್ಮಣ್ ಪರಿಸರದಲ್ಲಿ ಮತಯಾಚಿಸಿ ಜನತೆಯನ್ನ ಉದ್ದೇಶಿಸಿ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕನಾಗಿ, ಸಚಿವನಾಗಿ ಸ್ಧಾನವನ್ನ ಜವಾಬ್ಧಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಸಾಕಾರವಾಗಿದೆ.. ಅಂತರ್ಜಲ ವೃದ್ಧಿಗೆ ದಾಖಲೆ ಕಿಂಡಿ ಅಣೆಕಟ್ಟುಗಳು, ಕೆರೆಗಳ ಅಭಿವೃದ್ಧಿ, ಸರಕಾರಿ ಆಸ್ಪತ್ರೆ, ಕಟ್ಟಡಗಳ ಆಧುನೀಕರಣ, ಶಿಕ್ಷಣ ಕ್ಷೇತ್ರದ ಉನ್ನತೀಕರಣ, ಸೇತುವೆಗಳು, ಧ್ವಿಪಥ ಚತುಷ್ಪಥ ರಸ್ತೆಗಳು, ಕಾರ್ಕಳ ಉತ್ಸವದಂತಹ ಅಭೂತಪೂರ್ವ ಕಾರ್ಯಕ್ರಮ, ದೇಶದ ಗಮನ ಸೆಳೆದ ಕರಾವಳಿಯ ಸೃಷ್ಟಿಕರ್ತ ಪರಶುರಾಮ ಥೀಂ ಪಾರ್ಕ್ ನಿರ್ಮಾಣ, ಕಾರ್ಕಳದ ಜನತೆಗೆ ಉದ್ಯೋಗ ಕಲ್ಪಿಸಿಕೊಡಲಿರುವ ಜವಳಿ ಪಾರ್ಕ್ ಸೇರಿದಂತೆ ಅನೇಕ ಜನಹಿತ ಕಾರ್ಯಗಳು ಸಾಕಾರಗೊಂಡಿವೆ. ಸಾಮಾನ್ಯರ ಸಂಕಷ್ಟಗಳಿಗೆ ಸಂವೇದನಾಶೀಲನಾಗಿ ಸ್ಪಂದಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಾರ್ಕಳದ ಅಭಿವೃದ್ಧಿಯ ಕನಸು ಹೊತ್ತು ಕೆಲಸ ಮಾಡುತ್ತಿರುವ ನನಗೆ ಸ್ವರ್ಣ ಕಾರ್ಕಳದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಅವಕಾಶ ನೀಡುವಂತೆ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ರೈತರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, 108 ಕೋಟಿ ರೂ ವೆಚ್ಚದಲ್ಲಿ ಎಣ್ಣೆಹೊಳೆ ನೀರಾವರಿ ಯೋಜನೆ ಅನುಷ್ಟಾನ, ಮುಖ್ಯರಸ್ತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಹೆಬ್ರಿ ತಾಲೂಕಿಗೆ ಸಂಪೂರ್ಣ ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ತಾಲೂಕು ಪಂಚಾಯತ್ ಕಛೇರಿ, ನೂತನ ಬಸ್ ನಿಲ್ಧಾಣ ಕಾಮಗಾರಿ ಆರಂಭ, ಸುಸಜ್ಜಿತ ತಾಲೂಕು ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ, ಆಮ್ಲಜನಕ ಉತ್ಪಾದನಾ ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಧಾಪನೆ, 25 ವರ್ಷಗಳ ಹಳೆಯ ಚರಂಡಿ ವ್ಯವಸ್ಥೆ ಮರುನಿಮಾಣ, ವೈಜ್ಞಾನಿಕ ಆಧುನಿಕ ತಂತ್ರಜ್ಞಾನ ಬಳಕೆ, ನಿಟ್ಟೆ ಎಂಆರ್‌ಎಪ್ ಘಟಕ, ಹೆಬ್ರಿಯಲ್ಲಿ ಮಿನಿ ಎಂ ಆರ್‌ಎಫ್ ಘಟಕ ಸ್ಧಾಪನೆ ಮೂಲಕ ತ್ಯಾಜ್ಯ ಮುಕ್ತಿ, ಸ್ವಚ್ಚತೆಗೆ ಆಧ್ಯತೆ, ಪೇಟೆಗಳ ಸಮಗ್ರ ಅಭಿವೃದ್ಧಿ, ಜೋಡುರಸ್ತೆ, ಬಜಗೋಳಿ, ಮುನಿಯಾಲು, ಬೈಲೂರು 4 ಪಥ ರಸ್ತೆಗಳಾಗಿ ಪರಿವರ್ತನೆ, ಹೆಬ್ರಿ ಮತ್ತು ನಲ್ಲೂರಿನಲ್ಲಿ ಹರಿಯಪ್ಪನ ಕೆರೆ ಬಳಿ ಆಕರ್ಷಕ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣ,ಬಿ.ಎಸ್ಸಿ ನರ್ಸಿಂಗ್ ಕಾಲೇಜು, ಜರ್ಮನ್ ತಂತ್ರಜ್ಞಾನದೊಂದಿಗೆ ಯುವಕರಿಗೆ ಉದ್ಯೋಗ ಭದ್ರತೆ ನೀಡುವ ಕೆಜಿಟಿಟಿಐ, ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದ ಐಟಿಐ ಕಾಲೇಜು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾಸ್ಟೇಲ್ ಹಾಗೂ ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣ, ಸಾಣೂರು ಮಠದ ಕೆರೆ ಅಭಿವೃದ್ಧಿ ಮೂಲಕ ಕೃಷಿ ಭೂಮಿಗಳಿಗೆ ನೀರಧಾರೆ, ಪಳ್ಳಿ ಖೈರು ಕೆರೆ ಮುದ್ರಾಡಿ ಮದಗ ಕೆರೆ, ಹಿರ್ಗಾನ ಹರಿಯಪ್ಪನ ಕೆರೆ, ಎಳ್ಳಾರು ಹೊನ್ನೆಜೆಡ್ಡು ಕೆರೆ,ಬೇಳಂಜೆ ಮಲ್ಲಿಕಾರ್ಜುನ ದೇವಸ್ಧಾನ ಕೆರೆ ಅಭಿವೃದ್ಧಿಗೊಳಿಸಲಾಗಿದೆ ಎಂದ್ರು.

ದಾಖಲೆಯಲ್ಲಿ 94ಸಿ, 94ಸಿಸಿ ಹಕ್ಕುಪತ್ರಗಳ ವಿತರಣೆ, 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೆಡ್ಕರ್ ಭವನ ನಿರ್ಮಾಣ, ಮಾಳದಲ್ಲಿ ಮಲೆಕುಡಿಯ ಸಭಾಭವನ ನಿರ್ಮಾಣ, ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ, ದೇವಸ್ಧಾನ, ದೈವಸ್ಧಾನಗಳ ಅಭಿವೃದ್ಧಿಗೆ ಸೆರವು, ಮೆಸ್ಕಾಂ ವಿಭಾಗೀಯ ಕಚೇರಿ, ನಿಟ್ಟೆ ಉಪವಿಭಾಗ ಕಚೇರಿ, ಶಾಳಾ ಕಚೇರಿಗಳ ಸ್ಧಾಪನೆ, ಬೆಳ್ಮಣ್, ಅಜೆಕಾರು, ಬಜಗೋಳಿ, ಹಾಗೂ ಬೈಲೂರಿನಲ್ಲಿ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ, ಹೆಚ್ಚುವರಿ ಟಿಸಿಗಳ ಅಳವಡಿಕೆ,ಬಡ ಜನರಿಗೆ ಬೆಳಕು ಯೋಜನೆಯಲ್ಲಿ ಉಚಿತ ವಿದ್ಯುತ್, ಕಾರ್ಕಳ ಕೋರ್ಟ್, ತಾಲೂಕು ಪಂಚಾಯತ್. ಪೊಲೀಸ್ ಅತಿಥಿಗೃಹ, ದೇವರಾಜ ಅರಸು ಭವನ, ಅಕ್ಷರ ಭವನ ಸೇರಿ ಸರಕಾರಿ ಕಟ್ಟಡಗಳ ನವೀಕರಣ, ಕೋವೀಡ್ ಸಂದರ್ಭ ಮುಂಬಯಿ, ಪುಣೆ ಬೆಂಗಳೂರಿನ ಬಂಧುಗಳಿಗೆ ಕಾರಂಟೈನ್ ಕ್ಷೇತ್ರ ಜನತೆಯ ಸಂಕಷ್ಟಕ್ಕೆ ವಿವಿಧ ಆಯಾಮದಲ್ಲಿ ಸ್ಪಂದನೆ, ಸ್ಧಳೀಯ ಉತ್ಪನ್ನ ಕಾರ್ಲಕಜೆ, ಬಿಳಿಬೆಂಡೆಗೆ ಬ್ರಾö್ಯಂಡೆ ಬೆಳೆಯನ್ನಾಗಿಸಿ ಉತ್ತೇಜನ, ವಾತ್ಸಲ್ಯ ಆರೋಗ್ಯ ತಪಾಸಣೆ ಮೂಲಕ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ, ಭಾಷೆ, ಸಂಸ್ಕೃತಿ, ಕಲೆಯ ಸಂಭ್ರಮ ಕಾರ್ಕಳ ಉತ್ಸವ 2022, ಸ್ವರ್ಣ ಕಾರ್ಕಳದ ಮುಕುಟ ಪ್ರಾಯವಾದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ, ಮೊದಲಾದ ಕಾರ್ಯಗಳ ಮೂಲಕ ಅಮೂಲಾಗ್ರ ಬದಲಾವಣೆ ತರಲಾಗಿದೆ ಎಂದ್ರು…

5 ವರುಷ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಲಾಗಿದೆ. ಮುಂದೆಯೂ ಮತ್ತಷ್ಟು ಅಭಿವೃದ್ಧಿ ಚಿಂತನೆ,ಯೋಚನೆ ಜೊತೆಗೆ ಸಾಧಿಸುವ ಹಂಬಲ ನನ್ನಲ್ಲಿದೆ. ಇದುವರೆಗೆ ಆಗಿರುವ ಅಭಿವೃದ್ಧಿಯನ್ನು ನೆನಪಿಸಿಕೊಳ್ಳುತ್ತಲೆ ಮುಂದೆ ಆಗಬೇಕಾದ ಕಾರ್ಯಗಳ ಕಡೆ ಗಮನಹರಿಸಬೇಕಿದೆ. ಹೀಗಾಗಿ ಕಾರ್ಕಳ ಜನತೆ ಮತ್ತೊಮ್ಮೆ ನನ್ನನ್ನು ಬೆಂಬಲಿಸಿ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.