Friday, January 24, 2025
ಸುದ್ದಿ

ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಒತ್ತು – ಕಹಳೆ ನ್ಯೂಸ್

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಸಹಿತ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ನಗರದಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲು ವೇದವ್ಯಾಸ ಕಾಮತ್ ಮತ್ತೆ ಶಾಸಕರಾಗಬೇಕಿದೆ ಎಂದು ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಅಟಲ್ ಸೇವಾ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಿರಿ ಯೋಜನೆ ಮೂಲಕ 792 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ವೇದವ್ಯಾಸ ಕಾಮತ್ ಶ್ರಮಿಸಿದ್ದಾರೆ. ಈ ಯೋಜನೆ ಯಡಿಯೂರಪ್ಪ ಅವರ ಕೊಡುಗೆಯಾಗಿದೆ. ಕುಡ್ಸೆಂಪ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಇರುವುದರಿಂದ ಜಲಸಿರಿ ಯೋಜನೆ ರೂಪಿಸಬೇಕಾಯಿತು. ಈ ಯೋಜನೆ ಮೂಲಕ ನಗರದಲ್ಲಿ ಕುಡಿಯುವ ನೀರಿನ ಪೈಪ್ಲೈನ್, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಸಹಿತ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ನಗರದಲ್ಲಿ ನೀರಿನ ದರ ಇಳಿಕೆಗೆ ಶಾಸಕ ವೇದವ್ಯಾಸ್ ಕಾಮತ್ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಜನಸಾಮಾನ್ಯರ ಮೇಲಿನ ಹೊರೆ ತಪ್ಪಿಸಿದ್ದಾರೆ. ತುಂಬೆ ಡ್ಯಾಂನಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹರೇಕಳ ಡ್ಯಾಂನಿoದ ನಗರಕ್ಕೆ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 10 ಎಕರೆ ಸರ್ಕಾರಿ ಭೂಮಿ ಕಾದಿರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಗರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಅನುದಾನ ತಂದು ಮೂಲಸೌಲಭ್ಯ ಒದಗಿಸಿದ್ದಾರೆ. ಶಕ್ತಿನಗರದಲ್ಲಿ 930 ಮನೆಗಳ ವಸತಿ ಯೋಜನೆ ಜಾರಿಗೆ ಹಿಂದಿನಶಾಸಕರಿAದ ಉಂಟಾಗಿದ್ದ ತೊಂದರೆಯನ್ನು ನಿವಾರಿಸಿದ್ದಾರೆ. ಪಾಲಿಕೆಯ ವಿವಿಧ ಸೇವೆಗಳ ಉನ್ನತೀಕರಣ, ಸರಳೀಕರಣಕ್ಕೆ ಕಾರಣರಾಗಿದ್ದಾರೆ ಎಂದು ಅವರು ವಿವರಿಸಿದರು.

ನಗರದ ಪುರಭವನದ ಸಮೀಪ ನಡೆಸಿದ ಅಂಡರ್ ಪಾಸ್ ಕಾಮಗಾರಿ ಹಾಗೂ ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಅದರ ನಿರ್ವಹಣೆಗೆ ಸಂಬAಸಿದAತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿ ಯೋಜನೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಬಳಿಕ ಈ ಯೋಜನೆ ಸಮರ್ಪಕವಾಗಿ ನಿರ್ವಹಣೆಯಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಸಂಬoಧಿಸಿದ0ತೆ ವೇದವ್ಯಾಸ್ ಕಾಮತ್ ಅವರು ಶಾಸಕರಾದ ಬಳಿಕ ಸ್ಪಷ್ಟ ಯೋಜನೆ ರೂಪಿಸಿ, ಒಬ್ಬರು ಐಎಎಸ್ ದರ್ಜೆಯ ಅಧಿಕಾರಿಯನ್ನು ಸ್ಮಾರ್ಟ್ ಸಿಟಿ ಕಂಪನಿಗೆ ನಿಯೋಜಿಸಿ ರೂಪುರೇಶೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.

ಮೀನುಗಾರರಿಗೆ ಸರ್ಕಾರ ನೆರವು: ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸೃಜಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಜೆಟ್ಟಿ ವಿಸ್ತರಣೆ, ಯಾಂತ್ರೀಕೃತ ಮೀನುಗಾರಿಕೆಗೆ ಒತ್ತು ನೀಡುವ ಮೂಲಕ ಮೀನುಗಾರರ ಸಮಗ್ರ ಏಳಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸಿದೆ. ಬೆಂಗರೆಯಲ್ಲಿ 900 ಮನೆಗಳಿಗೆ ನಿವೇಶನದ ಹಕ್ಕುಪತ್ರ ನೀಡಲು ಶಾಸಕ ವೇದವ್ಯಾಸ ಕಾಮತ್ ಕ್ರಮ ಕೈಗೊಂಡಿದ್ದಾರೆ. ಇವರ ಏಳ್ಗೆಗೆ ಶಾಸಕರಾಗಿದ್ದ ಜೆ.ಆರ್.ಲೋಬೋ ಏನೂ ಕ್ರಮ ಕೈಗೊಂಡಿಲ್ಲ ಎಂದು ಮೀನುಗಾರಿಕಾ ನಿಗಮ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ಆರೋಪಿಸಿದರು.

4500ಕೋಟಿ ರೂ. ಅನುದಾನ: ಶಾಸಕ ವೇದವ್ಯಾಸ ಕಾಮತ್ ಅವರು ಕಳೆದ 5 ವರ್ಷದಲ್ಲಿ ಮಂಗಳೂರಿನ ಅಭಿವೃದ್ಧಿಗೆ 4500 ಕೋಟಿ ರೂ.ಗೂ ಹೆಚ್ಚಿನ ಅನುದಾನ ತರಿಸಿ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಜನತೆಗೆ ರಸ್ತೆ, ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಕೃತಕ ನೆರೆಗೆ ಪರಿಹಾರ: ಮಂಗಳೂರು ನಗರದಲ್ಲಿ ಕೃತಕ ನೆರೆ ತಡೆಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಯತ್ನದ ಫಲವಾಗಿ ಸಣ್ಣ ನೀರಾವರಿ ಇಲಾಖೆಯಿಂದ 100 ಕೋಟಿ ರೂ.ಗೂ ಹೆಚ್ಚಿನ ಅನುದಾನ ಬಂದಿದ್ದು, ಅನೇಕ ಕಡೆಗಳಲ್ಲಿ ನೆರೆ ಸಮಸ್ಯೆಗೆ ತಡೆಗೋಡೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಸಣ್ಣ ನೀರಾವರಿ ಇಲಾಖೆ ಮೂಲಕ ಇಷ್ಟೊಂದು ದೊಡ್ಡ ಅನುದಾನ ಬಂದಿರುವುದು ವಿಶೇಷ ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ರಾಜಾ ಕಾಲುವೆಗಳ ಹೂಳೆತ್ತಲು ಕ್ರಮ, ಸಮರ್ಪಕ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಸುಗಮ ನೀರು ಪೂರೈಕೆಗೆ ಶಾಸಕ ವೇದವ್ಯಾಸ ಕಾಮತ್ ಆದ್ಯತೆ ನೀಡಿದ್ದಾರೆ. ರಸ್ತೆ, ಚರಂಡಿ, ದಾರಿದೀಪ, ಸ್ಮರ‍್ಟ್ಸಿಟಿ ಕಾರ್ಯಗತಗೊಳಿಸಿದ್ದಾರೆ. 2026ರ ವೇಳೆಗೆ ಸಮಗ್ರ, ಸುಂದರ ಮಂಗಳೂರು ನಿರ್ಮಾಣದ ಕನಸು ಸಾಕಾರಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಪ್ರಮುಖರಾದ ರೂಪಾ ಡಿ. ಬಂಗೇರ, ರಮೇಶ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.