ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಧಿಸಿದAತೆ ಮೇ.10ರಂದು ಮತದಾನ ನಡಯಲಿದ್ದು, ಚುನಾವಣೆಯ ಮತ ಎಣಿಕೆ ಮೇ 13ರಂದು ಸುರತ್ಕಲ್‌ನಲ್ಲಿರುವ ಎನ್.ಐ.ಟಿ.ಕೆಯಲ್ಲಿ ನಡೆಯಲಿದೆ.
ಮತ ಎಣಿಕೆಯ ದಿನದಂದು ಜನಪ್ರತಿನಿಧಿಗಳು, ಚುನಾವಣಾ ಎಂಜೆಟರುಗಳು, ಮತ ಎಣಿಕೆ ಎಂಜೆಟ್‌ಗಳು, ಮತ ಎಣಿಕೆ ಕೇಂದ್ರಕ್ಕೆ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಮೇಲ್ವಿಚಾರಕರು, ಸಹಾಯಕರು, ಗ್ರೂಪ್ ಡಿ ಸಿಬ್ಬಂದಿಗಳು ಮತ್ತು ಇನ್ನಿತರ ಎಲ್ಲಾ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರದ ಆವರಣದೊಳಗೆ ಪ್ರವೇಶಿಸುವಾಗ ಮೊಬೈಲ್, ಎಲೆಕ್ಟಾçನಿಕ್ಸ್ ವಾಚ್, ಮತ್ತು ಇನ್ನಿತರೇ ಡಿಜಿಟಲ್ ತಂತ್ರಜ್ಞಾನದ ಉಪಕರಣಗಳೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಪ್ರಜಾಪ್ರಾತಿನಿಧಿ ಕಾಯ್ದೆ 1951ರ ಕಲಂ 126 ಹಾಗೂ ಭಾರತೀಯ ದಂಡ ಸಂಹಿತೆಯ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾಹಿತಿ ನೀಡಿದ್ದಾರೆ.