Friday, January 24, 2025
ಸುದ್ದಿ

ಡಿವೋರ್ಸ್ ಆಗಿದೆ.. ಫೋಟೋ ಶೂಟ್‌ಗಾಗಿ ಖರ್ಚು ಮಾಡಿದ ಹಣ ವಾಪಾಸ್ ನೀಡಿ..! : ಫೋಟೋಗ್ರಾಫರನ್ನ ಕಾಡುತ್ತಿರುವ ಮಹಿಳೆ – ಕಹಳೆ ನ್ಯೂಸ್

ಮದುವೆ ಅಂದ್ರೆ ಅಲ್ಲಿ ಸಂಭ್ರ ಸಡಗರ ಇರುತ್ತೆ. ಸಂಭ್ರಮದಿಂದ ಮದುವೆ ಮಾಡಿಕೊಂಡು ನಾನಾ ಬಗೆಯ ಫೋಟೋ ತೆಗಿಸಿಕೊಂಡು ಜೋಡಿಗಳು ಕುಷಿ ಪಡ್ತಾರೆ. ಆದ್ರೆ ಇದೀಗ ದಂಪತಿಗಳಿಬ್ಬರು ಡಿವೋರ್ಸ್ ಆಗಿದ್ದು ಮದುವೆ ಫೋಟೋ ಶೋಟ್ ಮಾಡಿದ ಫೊಟೋಗ್ರಾಫರ್‌ಗೆ ದೊಡ್ಡ ತಲೆನೋವಾಗಿದೆ ಸ್ವಾಮಿ..

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು.. ಮಹಿಳೆಯೊಬ್ಬಳು ನನಗೆ ಡಿವೋರ್ಸ್ ಆಗಿದೆ ನನ್ನ ಹಣ ವಾಪಾಸ್ ಕೊಡಿ ಎಂದು ಫೋಟೋಗ್ರಾಫರ್ ಬೆನ್ನು ಬಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. 4 ವರ್ಷದ ಹಿಂದೆ ಜೋಡಿಗಳು ಸಪ್ತಪದಿ ತುಳಿದಿದ್ದು ಇದೀಗ ಇವರಿಗೆ ಡಿವೋರ್ಸ್ ಆಗಿದೆ. ಹೀಗಾಗಿ ಮಹಿಳೆ 4 ವರ್ಷದ ಬಳಿಕ ಫೋಟೋಗ್ರಾಫರ್ ಅನ್ನು ಸಂಪರ್ಕಿಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೀವು 2019 ರಲ್ಲಿ ಡರ್ಬನ್‌ನಲ್ಲಿ ನಡೆದ ನನ್ನ ಫೋಟೋಶೂಟ್ ಮಾಡಿದ್ದೀರಿ. ಆದರೆ ನಾನೀಗ ಡಿವೋರ್ಸ್ ಪಡೆದಿದ್ದು, ನನಗೆ ಮತ್ತು ನನ್ನ ಮಾಜಿ ಪತಿಗೆ ಆ ಫೋಟೋಗಳ ಅಗತ್ಯವಿಲ್ಲ. ಹೀಗಾಗಿ ನಾನು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ವಾಪಾಸ್ಸು ಕೊಡಿ ಎಂದು ಕೇಳಿದ್ದಾಳೆ. ಆದರೆ ಪ್ರಾರಂಭದಲ್ಲಿ ಫೋಟೋಗ್ರಾಫರ್ ಆಕೆ ತಮಾಷೆ ಮಾಡುತ್ತಿದ್ದಾಳೆ ಎಂದು ಭಾವಿಸಿ, ಆಕೆಯ ಮೆಸೇಜ್‌ಗೆ ರಿಪ್ಲೇ ಮಾಡಿದ್ದಾನೆ. ಆದ್ರೆ ಕೊನೆ ಕೊನೆಗೆ ಆಕೆ ನಿಜವಾಗಿಯೂ ಹಣ ಹಿಂತಿರುಗಿಸುವAತೆ ಕೇಳುತ್ತಿದ್ದಾಳೆ ಎಂಬುದನ್ನು ಅರಿತುಕೊಂಡು ಬಳಿಕ ಫೋಟೋಗ್ರಾಫರ್ ಆಕೆಯ ಸಂದೇಶವನ್ನು ನಿರಾಕರಿಸುತ್ತಾನೆ. ಮಾತ್ರವಲ್ಲದೆ, ಆತನನಿಗೆ ನಿಜ ವಿಚಾರ ತಿಳಿದಂತೆ ಅಚ್ಚರಿಗೊಂಡು ಸಂದೇಶದ ಸ್ಕ್ರೀನ್ ಶಾಟ್ ಹೊಡೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾನೆ. ಫೋಟೋಗ್ರಾಫರ್ ಹಣ ಕೊಡುವುದನ್ನು ನಿರಾಕರಿಸಿದನ್ನು ಕಂಡು ಮಹಿಳೆ ಕೋಪಗೊಂಡಿದ್ದಾಳೆ. ಫೋಟೋಗ್ರಾಫರ್ ಮೇಲೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.

ಮಹಿಳೆ ಹಣ ಕೇಳಿದ್ದ ಮೆಸೇಜ್ ಅನ್ನು ಫೋಟೋಗ್ರಾಫರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊoಡಿದ್ದಾಳೆ. ಸದ್ಯ ಆತನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದೆ. ನಂತರ ಮಹಿಳೆಯ ಮಾಜಿ ಪತಿ ಫೋಟೋಗ್ರಾಫರ್ ಬಳಿ ಕ್ಷಮೆ ಕೇಳಿದ್ದಾನೆ.