Friday, January 24, 2025
ಸುದ್ದಿ

ಕೂಲಿ ಕಾರ್ಮಿಕನ ಮಗಳಿಗೆ 622 ಅಂಕ; ಅಪ್ಪನ ಬೆವರ ಹನಿಗೆ ಮಗಳ ಸಾಧನೆಯೇ ಫಲ – ಕಹಳೆ ನ್ಯೂಸ್

ಎಸ್ಸೆಸ್ಸೆಲ್ಸಿಯಲ್ಲಿ ಕೂಲಿ ಕಾರ್ಮಿಕನ ಮಗಳೋರ್ವಳು 625ಕ್ಕೆ 622 ಅಂಕಗಳನ್ನು ಪಡೆಯುವ ಮೂಲಕ ಅಪ್ಪನ ಬೆವರ ಹನಿಗೆ ಸಾಧನೆಯ ಫಲ ನೀಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ-ತಾಯಿ ದೂರದ ಬಾಗಲಕೋಟೆಯಲ್ಲಿದ್ದಾರೆ. ತಂದೆ ಹೊಟೇಲ್ ಒಂದರಲ್ಲಿ ಕೂಲಿ ಕಾರ್ಮಿಕರಾಗಿದ್ದರೆ, ತಾಯಿ ಗೃಹಿಣಿ. ಇವರ ಪುತ್ರಿ ಧನ್ಯಾ ನಾಯ್ಕ ಈಗ ಎಸೆಸೆಲ್ಸಿಯಲ್ಲಿ 622 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಇಲ್ಲಿ ಚಿಕ್ಕಮ್ಮ ಅಕ್ಕರೆಯಿಂದ ಸಾಕಿದರು. ಅವರ ಬೆವರ ಹನಿಗೆ ಕಷ್ಟಪಟ್ಟು ಓದಿಸಿದ್ದರಿಂದ, ಚಿಕ್ಕಮ್ಮ ನನ್ನ ಚೆನ್ನಾಗಿ ನೋಡಿಕೊಂಡಿದ್ದರಿoದ ಅವರ ಬೆವರ ಹನಿಗೆ ಪ್ರತಿಫಲವಾಗಿ ಈ ಅಂಕ ಪಡೆಯಲು ಸಾಧ್ಯವಾಯಿತು’ ಧನ್ಯಾ ಬಾವುಕಳಾಗಿದ್ದಾಳೆ. ಸದ್ಯ ಇವಳು ಕುಕ್ಕುಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.

ಮೂಲತಃ ಹೆಬ್ರಿ ತಾಲೂಕಿನ ಮುಂಡೊಳ್ಳಿಯ ನರಸಿಂಹ ನಾಯ್ಕ ಮತ್ತು ಸುಲೋಚನಾ ದಂಪತಿ ಮರಾಠಿ ಸಮುದಾಯಕ್ಕೆ ಸೇರಿದವರು. 18 ವರ್ಷದ ಹಿಂದೆ ಕೂಲಿ ಅರಸುತ್ತ ಹೊರ ಊರಿಗೆ ಹೋದವರು ಪ್ರಸ್ತುತ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಹಿರಿಯವಳೇ ಧನ್ಯಾ. ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪಡೆದು ಕಾರ್ಕಳದಲ್ಲಿ ಉತ್ತಮ ಶಿಕ್ಷಣಕ್ಕೆಂದು ಬಂದು ಕುಕ್ಕುಜೆ ಶಾಲೆ ಸೇರಿದರು.

ತಮ್ಮ ಚಿಕ್ಕಮ್ಮನ ಮನೆ ಹರಿಖಂಡಿಗೆಯಲ್ಲಿದ್ದು ಕಲಿಯತೊಡಗಿದ ಧನ್ಯಾ, ತಂದೆ-ತಾಯಿಯ ಕಷ್ಟ ಆರಿತು ಛಲದಿಂದ ಶ್ರಮಪಟ್ಟು ಅಧ್ಯಯನ ಮಾಡಿದ ಫಲವೀಗ ಫಲಿತಾಂಶದಲ್ಲಿ ಗೋಚರಿಸಿದೆ. ಮಗಳ ನೋಡಲೆಂದು ಬಂದಿದ್ದ ತಂದೆ-ತಾಯಿ ಫಲಿತಾಂಶ ಪ್ರಕಟಗೊಂಡ ಅರ್ಧ ತಾಸಿನ ಹಿಂದೆಯಷ್ಟೆ ವಾಪಸ್ ಬಾಗಲಕೋಟೆಯತ್ತ ಹೊರಟರು. ಪ್ರಯಾಣದಲ್ಲಿ ಇರುವಾಗಲೇ ಧನ್ಯಾ ಕರೆ ಮಾಡಿ ಸಂತಸ ಹಂಚಿಕೊoಡಿದ್ದಾರೆ.

ಎಳವೆಯಲ್ಲಿಯೇ ಬಡತನದಿಂದ ಬೆಳೆದವಳು ನಾನು. ತಂದೆ ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುತ್ತ ಬೆಂಕಿಯಲ್ಲಿ ಬೇಯುವುದನ್ನು ಕಂಡಾಗ ನಾನೂ ಏನಾದರೂ ಸಾಧಿಸಬೇಕು. ಚಿಕ್ಕಮ್ಮ ಸುಜಾತಾ ಮನೆಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಆರೈಕೆ ಮತ್ತು ಆಶೀರ್ವಾದ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನಲು ಧನ್ಯಾ ಮರೆಯುವುದಿಲ್ಲ.ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ನೀಟ್ ಪರೀಕ್ಷೆ ಪಡೆದು ಎಂಬಿಬಿಎಸ್ ಕಲಿತು ಡಾಕ್ಟರ್ ಆಗುವೆ. ಬಡವರ ಸೇವೆ ಮಾಡುವೆ. ಅಪ್ಪ ಅಮ್ಮ ನನಗಾಗಿ ಹರಿಸಿದ ಬೆವರಿಗೆ ಪ್ರತಿಫಲವನ್ನು ವೈದ್ಯಳಾಗುವ ಮೂಲಕ ಈಡೇರಿಸಿ ಕೊಡುವೆ ಅನ್ನೋದು ಧನ್ಯಾಳ ಅಭಿಪ್ರಾಯ.