ಬಂಗಾಳ ಕೊಲ್ಲಿಯಲ್ಲಿ ಮೋಕಾ ಚಂಡಮಾರುತದ ತೀವ್ರತೆಯು ಜೋರಾಗಿದ್ದು, ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಬರುತ್ತಿದೆ. ಮೋಕಾ ಸೈಕ್ಲೋನ್ ನಾಳೆ ಲ್ಯಾಂಡ್‌ಫಾಲ್ ಆಗಲಿದೆ ಎಂದು ಇಂಡಿಯಾ ಮೆಟ್ರೊಲಾಜಿಕಲ್ ಡಿಪಾರ್ಟ್ಮೆಂಟ್ ತಿಳಿಸಿದೆ.
ಬಂಗಾಳ ಕೊಲ್ಲಿಯ ಆಗ್ನೆಯ ಭಾಗದಿಂದ ಸ್ಲೈಕೋನ್ ಬರುತ್ತಿದ್ದು, ನಾಳೆ ಲ್ಯಾಂಡ್‌ಫಾಲ್ ಆಗಲಿದೆ. ಬಂಗ್ಲಾದೇಶ ಮತ್ತು ಮಯನ್ಮಾರ್ ಕರಾವಳಿ ಭಾಗದಲ್ಲಿ ಭಾರೀ ಅನಾಹುತ ಸೃಷ್ಟಿಯಾಗುವ ಎಚ್ಚರಿಕೆ ನೀಡಿದೆ.
ಭಾರತದ ಎಲ್ಲಾ ಕರಾವಳಿ ಪ್ರದೇಶದಲ್ಲೂ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಜೊತೆಗೆ ಪ್ರವಾಸೋದ್ಯಮ ಚಟುವಟಿಕೆಗಳನ್ನೂ ತಕ್ಷಣ ನಿಲ್ಲಿಸುವಂತೆ ಸೂಚಿಸಲಾಗಿದ್ದು, ಇಂದಿನಿAದ 12ನೇ ತಾರಿಖಿನವರೆಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಅದರಲ್ಲೂ ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್‌ಗಳಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಲಾಗಿದೆ.
ತಮಿಳುನಾಡು ಕರಾವಳಿಯಲ್ಲೂ ಅಪಾಯದ ಎಚ್ಚರಿಕೆಯನ್ನು ನೀಡಲಾಗಿದೆ. ಕರ್ನಾಟಕದ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಹಿನ್ನೆಲೆಯಲ್ಲಿ ವಿಪರೀತ ಚಳಿ ಆಗಲಿದೆ. ಸಮುದ್ರ ತೀರದಲ್ಲಿ 1-2 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.