Friday, November 22, 2024
ರಾಜ್ಯಸುದ್ದಿ

ಚಿನ್ನದ ಬೆಲೆಯ ಲಿಥಿಯಮ್ ನಿಕ್ಷೇಪ ಪತ್ತೆ : ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುವ ಸಾದ್ಯತೆ –ಕಹಳೆ ನ್ಯೂಸ್

ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಬಲ್ಲ ಲಿಥಿಯಮ್ ನಿಕ್ಷೇಪವೊಂದು ರಾಜಸ್ಥಾನದಲ್ಲಿ ಪತ್ತೆಯಾಗಿದೆ. ಇದು ಅಂತಿAಥಾ ಲೋಹದ ನಿಕ್ಷೇಪವಲ್ಲ. ಇವಿ ಬ್ಯಾಟರಿ ತಯಾರಿಕೆಗೆ ಬಳಸಲಾಗುವ ಮತ್ತೊಂದು ಅತಿ ದೊಡ್ಡ ಲಿಥಿಯಮ್ ನಿಕ್ಷೇಪ ಪತ್ತೆಯಾಗಿದೆ. ಚಿನ್ನದ ಬೆಲೆ ಇರುವ ಲಿಥಿಯಮ್ ಆಗಿದ್ದು ಇದನ್ನ ವೈಟ್ ಗೋಲ್ಡ್ ಅಂತಾನೂ ಕರೆಯಲಾಗುತ್ತೆ.

ರಾಜಸ್ಥಾನ ರಾಜ್ಯದ ನಾಗೌರು ಜಿಲ್ಲೆಯಲ್ಲಿ ಈ ಲಿಥಿಯಂ ನಿಕ್ಷೇಪವಿದೆ. ಇದು ಭಾರತದ ಶೇಕಡಾ ೮೦ರಷ್ಟು ಲಿಥಿಯಂ ಬೇಡಿಕೆಯನ್ನು ಪೂರೈಸುವ ಅತಿದೊಡ್ಡ ನಿಕ್ಷೇಪವಾಗುವ ಸಾಧ್ಯತೆ ಇದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಜಮ್ಮು ಕಾಶ್ಮೀರದಲ್ಲೂ ೫.೯ ಮಿಲಿಯನ್ ಟನ್‌ಗಿಂತ ಹೆಚ್ಚಿನ ಪ್ರಮಾಣದ ನಿಕ್ಷೇಪ ಪತ್ತೆಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ಇದಕ್ಕಿಂತಲೂ ಅಧಿಕ ಪ್ರಮಾಣದ ಲಿಥಿಯಂ ನಿಧಿ ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖವಾಗಿ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಬ್ಯಾಟರಿಗಳಲ್ಲಿ ಈ ಲಿಥಿಯಂ ಅನ್ನು ಬಳಕೆ ಮಾಡಲಾಗುತ್ತೆ. ಇಲ್ಲಿಯವರೆಗೂ ಲಿಥಿಯಂ ಖನಿಜ ಭಾರತದಲ್ಲಿ ಲಭ್ಯವಿಲ್ಲದ ಕಾರಣ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಮಾಡಿಕೊಳ್ಳುವುದರಿಂದ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ದುಬಾರಿ ಆಗಿದೆ. ೨೦೨೦-೨೧ರಲ್ಲಿ ಲಿಥಿಯಂ ಆಮದಿಗಾಗಿಯೇ ಭಾರತ ಸರಿ ಸುಮಾರು ೬ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಸದ್ಯ ರಾಜಸ್ಥಾನದಲ್ಲಿ ಬಹು ಬೇಡಿಕೆಯ ಲಿಥಿಯಂ ನಿಕ್ಷೇಪ ಪತ್ತೆಯಾಗಿರೋದು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಕಡಿಮೆ ಆಗುವ ಸುಳಿವು ಸಿಕ್ಕಿದೆ.

ಲಿಥಿಯಂ ಇದು ಅತ್ಯಂತ ದುಬಾರಿ ಲೋಹ. ಈ ಲೋಹದಿಂದ ತಯಾರಿಸೋ ಎಲೆಕ್ಟ್ರಿಕ್ ವೆಹಿಕಲ್‌ಗಳ ಪವರ್ ಜಾಸ್ತಿಯಾಗಿರಲಿದೆ. ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲೇ ಕಡಿಮೆ ಬೆಲೆಯಲ್ಲಿ ಕೊಳ್ಳಬಹುದು. ಇಡೀ ಇದು ದೇಶಕ್ಕೆ ಅಗತ್ಯವಿರೋ ಶೇ.೮೦ ರಷ್ಟು ವಿದ್ಯುತ್ ಶಕ್ತಿ ಬೇಡಿಕೆಯನ್ನು ಪೂರೈಸಲಿದೆ ಎಂಬುದು ಗಮನಾರ್ಹ.