Recent Posts

Friday, November 22, 2024
ಸುದ್ದಿ

ಮೋದಿಗೆ ನೊಬೆಲ್ ಶಾಂತಿ ಸಿಗಬೇಕೆಂದು ಡಾ. ತಮಿಳ್ ಸಾಯಿ ಮನವಿ – ಕಹಳೆ ನ್ಯೂಸ್

ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ಡಾ.ತಮಿಳ್ ಸಾಯಿ ಸೌಂದರಾಜನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದ್ದಾರೆ.

ವಿಶ್ವದ ಅತೀ ದೊಡ್ಡ ಆರೋಗ್ಯ ವಿಮೆ ಆಯುಷ್ಮಾನ್ ಭಾರತವನ್ನು ಉದ್ಘಾಟಿಸಿದ ಮೋದಿ ಅವರಿಗೆ ಈ ಗೌರವ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಯುಷ್ಮಾನ್ ಭಾರತ ಯೋಜನೆಯೂ ಕೋಟ್ಯಂತರ ಬಡವರ ಬದುಕಿನ ಆಶಾಕಿರಣವಾಗಲಿದೆ. ಇದು ಹಲವರ ಬದುಕನ್ನು ಬದಲಿಸಲಿದೆ” ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ ಅತೀ ಹೆಚ್ಚು ವೆಚ್ಚವಾಗುವುದೇ ಆರೋಗ್ಯ ಕ್ಷೇತ್ರದಲ್ಲಿ. ಆದ್ದರಿಂದ ಜನರ ನಾಡಿಮಿಡಿತವನ್ನು ಅರಿತು, ಆಯುಷ್ಮಾನ್ ಭಾರತ ಅಥವಾ ಮೋದಿ ಕೇರ್ ನಂಥ ಯೋಜನೆಯನ್ನು ಜಾರಿಗೆ ತಂದಿದ್ದು ಮೋದಿ ಅವರ ಹೆಗ್ಗಳಿಕೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿಯವರ ಹೆಸರನ್ನು ಸೂಚಿಸುವುದಕ್ಕೆ ಜನವರಿ 31, 2018 ಕೊನೆಯ ದಿನವಾಗಿದೆ. ಸೆ.23 ರಂದು ಮೋದಿಯವರು ರಾಂಚಿಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದರು.

ಸುಮಾರು 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಾರ್ಷಿಕ ಸುಮಾರು 5 ಲಕ್ಷ ರೂ. ವರೆಗೆ ನಗದು ರಹಿತ ಆರೋಗ್ಯ ವಿಮೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಈ ಯೋಜನೆಗೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಅವರ ಹೆಸರನ್ನು ಶಿಫಾರಸ್ಸು ಮಾಡಲು ತಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಅವರು ಜನರ ಬಳಿ ಮನವಿ ಮಾಡಿದ್ದಾರೆ.