Monday, November 25, 2024
ಸುದ್ದಿ

ಗ್ರಾಮಸ್ಧರ ಆಕ್ರೋಶ : ಈವಿಎಂ ಮೆಷಿನ್ ಹಾಗೂ ವಿವಿಪ್ಯಾಟ್ ಪುಡಿಪುಡಿ – ಕಹಳೆ ನ್ಯೂಸ್

ವಿಜಯಪುರ: ವೋಟಿಂಗ್ ಸಮಯದಲ್ಲಿ ಈವಿಎಂ ಮೆಷಿನ್ ಹಾಗೂ ವಿವಿಪ್ಯಾಟ್‌ಗಳನ್ನ ಗ್ರಾಮಸ್ಧರು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ವಿಜಯಪುರದ ಬಸವನಬಾಗೇವಾಡಿ ಕ್ಷೇತ್ರದ ಮಸಬನಾಳ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಸವನಬಾಗೇವಾಡಿ ತಾಲೂಕಿನ ಮಸಬನಾಳ ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿತ್ತು. ಮತದಾನಕ್ಕಾಗಿ ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರಲಗಿದೆ. ಈ ವೇಳೆ ಅರ್ಧಕ್ಕೆ ಮತದಾನ ನಿಲ್ಲಿಸಿ ಮತಯಂತ್ರಗಳನ್ನು ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ಗ್ರಾಮಸ್ಥರು ತಪ್ಪಾಗಿ ಭಾವಿಸಿದ್ದಾರೆ. ಮತಯಂತ್ರಗಳನ್ನು ವಾಪಸ್ ತರುತ್ತಿದ್ದಾಗ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಚುನಾವಣಾ ಸಿಬ್ಬಂದಿಗಳು ಸರಿಯಾಗಿ ಉತ್ತರಿಸದೇ ಇದ್ದಾಗ ತಪ್ಪಾಗಿ ತಿಳಿದ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಗ್ರಾಮಸ್ಥರು ಒಡೆದು ಹಾಕಿದ ಮತಯಂತ್ರಗಳು ರಿಸರ್ವ್ ಮತಯಂತ್ರಗಳಾಗಿವೆ. ಮತಯಂತ್ರ ಕೆಟ್ಟಲ್ಲಿ ಬಳಕೆ ಮಾಡಲು ಈ ಇವಿಎಂ ಹಾಗೂ ವಿವಿ ಪ್ಯಾಟ್ ಮಷಿನ್‌ಗಳನ್ನು ಇಡಲಾಗಿತ್ತು. ಈ ಮತಯಂತ್ರಗಳನ್ನು ವಾಪಸ್ ತರುತ್ತಿರುವಾಗ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಸಿಬ್ಬಂದಿಗಳಿಗೆ ಥಳಿಸಿ, ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ.
ಮಸಬನಾಳ ಗ್ರಾಮದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.