Wednesday, January 22, 2025
ಉಡುಪಿರಾಜಕೀಯಸುದ್ದಿ

ಹೆಜಮಾಡಿ ಕೋಡಿ ಜನಹಿತ ವ್ಯಾಯಾಮ ಶಾಲೆಯಲ್ಲಿ ಹನುಮಾನ್ ಚಾಲೀಸ ಮತ್ತು ಶ್ರೀ ರಾಮರಕ್ಷಾ ಸ್ತೋತ್ರ ಪಠಣ – ಕಹಳೆ ನ್ಯೂಸ್

ಹೆಜಮಾಡಿ ಕೋಡಿ ಜನಹಿತ ವ್ಯಾಯಾಮ ಶಾಲೆಯಲ್ಲಿ ಇಂದು ಲೋಕ ಕಲ್ಯಾಣಾರ್ಥವಾಗಿ ಮತ್ತು ಹಿಂದು ಸಮಾಜದ ಸುರಕ್ಷತೆಗಾಗಿ ಹನುಮಾನ್ ಚಾಲೀಸ ಮತ್ತು ಶ್ರೀ ರಾಮರಕ್ಷಾ ಸ್ತೋತ್ರ ಪಠಣ ನಡೆಯಿತು.

ಈ ಸಂದರ್ಭದಲ್ಲಿ ಹಿಂದು ಸಮಾಜದಲ್ಲಿ ಸೇವೆ, ಸುರಕ್ಷೆ ಮತ್ತು ಸಂಸ್ಕಾರಗಳ ಉದ್ದೇಶದಿಂದ ಪ್ರಾರಂಭವಾದ ಬಜರಂಗದಳ ನಿಷೇಧದ ಕೂಗು ಕೇಳಿಬರುತ್ತಿರುವ ಬಗ್ಗೆ ಒಕ್ಕೊರಲಿನಿಂದ ಖಂಡಿಸಲಾಯಿತು. ಮುಂದೆ ಬರುವ ಚುನಾವಣೆಯಲ್ಲಿ ಇಂತಹ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಆಗ್ರಹಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಸತೀಶ್ ಕೋಟ್ಯಾನ್, ಸುರೇಶ್ ಹೆಜಮಾಡಿ, ಸಂದೀಪ್ ಕೋಟ್ಯಾನ್ ಕೋಡಿ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.