Friday, September 20, 2024
ಕ್ರೀಡೆಸುದ್ದಿ

ಇಂದು ಭಾರತಕ್ಕೆ ಸೆಮಿಪೈನಲ್ ಪಂದ್ಯ – ಕಹಳೆ ನ್ಯೂಸ್

ದೆಹಲಿ: ಸಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ದ ಜಯಭೇರಿಯನ್ನು ಸಾಧಿಸಿದ ಭಾರತ ತಂಡವು ಇಂದು ಅಫ್ಘಾನಿಸ್ತಾನದ ವಿರುದ್ದ ಸೆಣಸಾಡಲಿದೆ. ಇದೊಂದು ರೋಚಕ ಪಂದ್ಯವಾಗಿದ್ದು ಯಾವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ ಎಂಬುದು ಈ ಮ್ಯಾಚ್‌ನಲ್ಲಿ ತಿಳಿಯಲಿದೆ.

ಮೊನ್ನೆ ತಾನೆ ಪಾಕ್ ವಿರುದ್ದ ಭರ್ಜರಿ ಜಯಭೇರಿ ಸಾಧಿಸಿದ ಭಾರತದ ರೋಹಿತ್ ಪಡೆ ಇಂದು ಇನ್ನೊಂದು ತಂಡದ ವಿರುದ್ದ ಹೋರಾಟಕ್ಕೆ ಇಳಿಯಲಿದೆ. ಸಂಜೆ 5 ಗಂಟೆಗೆ ಶುರುವಾಗಲಿರುವ ಈ ಪಂದ್ಯಾಟವು ದುಬೈನಲ್ಲಿ ನಡೆಯಲಿದೆ. ವಿರಾಟ್ ಫಿಟ್‌ನೆಸ್ ಮಂತ್ರವನ್ನು ಫೊಲೊ ಮಾಡ್ತಿರುವ ಆಪ್ಘಾನ್ ಪಡೆ ಈ ಸಲ ಏಷ್ಯಾ ಕಪ್‌ನಲ್ಲಿ ಸಖತ್ ಫೈಟ್ ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಏಷ್ಯಾ ಕಪ್‌ನ ಸೆಮಿ ಫೈನಲ್ ಪಂದ್ಯವಾಗಿದ್ದು ಈ ಪಂದ್ಯ ಯಾವ ಟೀಮ್ ವಿನ್ ಆಗುತ್ತೋ ಅದೇ ತಂಡ ಮುಂದೆ ಫೈನಲ್‌ನಲ್ಲಿ ಆಡಲಿವೆ. ಸೂಪರ್ ಫೋರ್ ಪಂದ್ಯಾಟದ ಸೆಮಿ ಪೈನಲ್ ಎರಡು ಹಂತದಲ್ಲಿ ನಡೆಯಲಿದ್ದು ಇಂದು ವiತ್ತು ನಾಳೆ ನಡೆಯಲಿದೆ.

ಜಾಹೀರಾತು

ನಾಳೆ ಪಾಕ್ ಮತ್ತು ಬಾಂಗ್ಲಾ ದೇಶದ ನಡುವೆ ನಡೆಯಲಿದ್ದು ಇದರಲ್ಲಿ ವಿನ್ ಆದ ತಂಡ ೨೮ ರಂದು ನಡೆಯುವ ಪೈನಲ್‌ಗೆ ಪ್ರವೇಶಿಸಲಿದೆ. ಏಷ್ಯಾಕಪ್‌ನಲ್ಲಿ ಭಾರತದ್ದೇ ಸಿಂಹಪಾಲಿದ್ದು ಇಂದು ನಡೆಯುವ ಮ್ಯಾಚ್ ಕ್ರಿಕೆಟ್ ಲೋಕದಲ್ಲೇ ಹೊಸ ಅಧ್ಯಾಯವಾಗಿ ಪರಿಣಮಿಸಲಿದೆ.