Monday, January 20, 2025
ಸುದ್ದಿ

ಚುನಾವಣೆ ಹಿನ್ನಲೆ 2 ದಿನ ಮದ್ಯದಂಗಡಿ ಬಂದ್ : ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ರೂಪಾಯಿ ನಷ್ಟ..! –ಕಹಳೆ ನ್ಯೂಸ್

ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಾದ್ಯಂತ ಮದ್ಯದಂಗಡಿ ಬಂದ್ ಮಾಡಲಾಗಿತ್ತು. 2 ದಿನಗಳ ಕಾಲ ಮದ್ಯ ಸರಬರಾಜನ್ನು ಸಂಫೂರ್ಣ ನಿಷೇಧಿಸಿತ್ತು. ಮದ್ಯದಂಗಡಿ ಬಂದ್ ಆದ ಕಾರಣ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ನಷ್ಟ ಉಂಟಾಗಿದೆ
ರಾಜ್ಯದಲ್ಲಿ ಒಟ್ಟು 12500 ಬಾರ್, ವೈನ್ ಶಾಪ್ ಮತ್ತು ಎಂಆರ್ ಪಿಎಲ್ ಗಳಿದ್ದು, ಪ್ರತಿ ದಿನ ಸರ್ಕಾರಕ್ಕೆ 80 ರಿಂದ 90 ಕೋಟಿ ಆದಾಯ ಬರುತ್ತಿತ್ತು. ಆದರೆ ಮೇ 10ಕ್ಕೆ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮದ್ಯದಂಗಡಿ ಬಂದ್ ಮಾಡಲಾಗಿತ್ತು. 2 ದಿನದಲ್ಲಿ ಮದ್ಯದಂಗಡಿ ಬಂದ್ ಮಾಡಿದ್ದಕ್ಕೆ 150 ಕೋಟಿಗೂ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಕ್ಕೆ ಮಾತ್ರವಲ್ಲದೆ, ಬಾರ್ ಮಾಲೀಕರಿಗೂ ನಷ್ಟವಾಗಿದೆ. ಒಂದು ಬಾರ್‌ಗೆ ದಿನಕ್ಕೆ 1.5 ಲಕ್ಷ ರೂಪಾಯಿಗೂ ಅಧಿಕ ವ್ಯವಹಾರ ನಡೆಯುತ್ತದೆ. ಒಂದು ಎಂಆರ್‌ಪಿಎಲ್ ಶಾಪ್‌ನಲ್ಲಿ 3 ಲಕ್ಷ ರೂಪಾಯಿಗೂ ಅಧಿಕ ಮದ್ಯ ಮಾರಾಟವಾಗುತ್ತದೆ.
ಇನ್ನು ಸರ್ಕಾರಕ್ಕೆ 12,500 ಮದ್ಯದಂಗಡಿಯಿoದ ಸರಾಸರಿ 187 ಕೋಟಿಗೂ ಅಧಿಕ ಬಿಸನೆಸ್ ಆಗುತ್ತದೆ. 2 ದಿನ ಬಂದ್ ಆಗಿ ಮದ್ಯದಂಗಡಿಗಳಿಗೆ ಸುಮಾರು 350 ಕೋಟಿ ರೂಪಾಯಿ ವ್ಯವಹಾರ ನಷ್ಟವಾಗಿದೆ.

ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀರಲಿದೆ. ಈ ಹಿನ್ನಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಹಾಗಾಗಿ ನಾಳೆ ರಾತ್ರಿ(12-5-2023)ಯಿಂದ ಮತ್ತೆ ಒಂದು ದಿನ ಮದ್ಯದಂಗಡಿ ಅನ್ನು ಸರ್ಕಾರ ಬಂದ್ ಮಾಡಲಿವೆ. ಹೀಗಾಗಿ ಮತ್ತಷ್ಟು ನಷ್ಟವಾಗುವ ಸಾದ್ಯತೆ ಇದೆ.