Recent Posts

Monday, January 20, 2025
ಸುದ್ದಿ

ಪೂರ್ಣಗೊಳ್ಳುವ ಹಂತದಲ್ಲಿ ಮೇಘಾ ಶೆಟ್ಟಿ, ಹರೀಶ್ ರಾಜ್ ನಟನೆಯ ‘ಜೊತೆ ಜೊತೆಯಲಿ’ ಸಿರೀಯಲ್ –ಕಹಳೆ ನ್ಯೂಸ್

ಮೇಘಾ ಶೆಟ್ಟಿ ಹಾಗೂ ಹರೀಶ್ ರಾಜ್ ನಟನೆಯ ‘ಜೊತೆ ಜೊತೆಯಲಿ’ ಧಾರಾವಾಹಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ.
ಕಳೆದ ವರ್ಷ ಅನಿರುದ್ಧ ಜತ್ಕರ್ ಅವರು ಧಾರಾವಾಹಿಯಿಂದ ಹೊರ ನಡೆದರು. ಆ ಬಳಿಕ ಈ ಧಾರಾವಾಹಿಗೆ ಹರೀಶ್ ರಾಜ್ ಎಂಟ್ರಿ ಆಯಿತು. ಈಗ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಕಾರಣ ಕೂಡ ರಿವೀಲ್ ಆಗಿದೆ. ಈ ವಿಚಾರ ಕೇಳಿ ಈ ಧಾರಾವಾಹಿಯನ್ನು ಇಷ್ಟಪಡುವವರು ಬೇಸರಗೊಂಡಿದ್ದು, ‘ಜೊತೆ ಜೊತೆಯಲಿ’ ಧಾರಾವಾಹಿಯನ್ನು ಆರೂರು ಜಗದೀಶ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ‘

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ್ ಅವರು ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಆಗಲೇ ಈ ಧಾರಾವಾಹಿ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಧಾರಾವಾಹಿ ಕಥೆಗೆ ನಿರ್ದೇಶಕರು ಟ್ವಿಸ್ಟ್ ನೀಡಿದರು. ಕಥೆಯನ್ನು ಬದಲಿಸಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಯಿತು. ಈಗ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಗೆ ಕಲಾವಿದರ ಡೇಟ್ಸ್ ತೊಂದರೆ ಆಗಿದೆ. ಈ ಕಾರಣಕ್ಕೆ ಆರೂರು ಜಗದೀಶ್ ಅವರು ಧಾರಾವಾಹಿ ಮುಗಿಸುವ ಆಲೋಚನೆಯಲ್ಲಿದ್ದಾರೆ ಎನ್ನುತ್ತಿವೆ ಮೂಲಗಳು. ಸದ್ಯ ಅವರು ಈ ವಿಚಾರದಲ್ಲಿ ವಾಹಿನಿಯವರ ಒಪ್ಪಿಗೆ ಪಡೆಯಬೇಕಿದೆ. ಅಲ್ಲಿ ಗ್ರೀನ್‌ಸಿಗ್ನಲ್ ಸಿಕ್ಕ ಬಳಿಕ ಅವರು ಧಾರಾವಾಹಿ ಕೊನೆಗೊಳಿಸಲಿದ್ದಾರೆ. ಡೇಟ್ಸ್ ಕೊಟ್ಟು ಶೂಟಿಂಗ್ ಬರದೇ ಇರುವುದು ತಂಡಕ್ಕೆ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.