Recent Posts

Sunday, January 19, 2025
ಸಿನಿಮಾಸುದ್ದಿ

‘ಯುವ ನಟಿ ಅನಿಕಾ ಸುರೇಂದ್ರನ್ ಮೃತ್ಯು’ ಎನ್ನಲಾದ ಕರಪತ್ರ ಸೋಷಲ್ ಮೀಡಿಯಾದಲ್ಲಿ ವೈರಲ್ – ಕಹಳೆ ನ್ಯೂಸ್

ಯುವ ನಟಿ ಅನಿಕಾ ಸುರೇಂದ್ರನ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಬಾಲ ಕಲಾವಿದೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಈಗ ನಾಯಕಿ ಆಗಿ ಮಿಂಚುತ್ತಿರುವ ಅವರು ಮೃತಪಟ್ಟಿದ್ದಾರೆ ಎನ್ನುವ ಕರಪತ್ರ ವೈರಲ್ ಆಗ್ತಾ ಇದೆ.

ಹೌದು, ಇದು ಸೋಶಿಯಲ್ ಮೀಡಿಯಾ ಯುಗವಾಗಿದೆ. ಸತ್ಯ ಹಾಗೂ ಸುಳ್ಳು ಎರಡೂ ಬೇಗ ಪ್ರಸಾರ ಆಗುತ್ತದೆ. ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಸಂಗತಿಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಅನಿಕಾ ಸುರೇಂದ್ರನ್ ಅವರು ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಹೌದು ನಟಿ ಅನಿಕಾ ಮೃತಪಟ್ಟಿದ್ದಾರೆ ಎನ್ನುವ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳಿಗೆ ಆತಂಕ ಅಗಿದ್ದು, ನಂತರ ಅಸಲಿ ವಿಚಾರ ತಿಳಿದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಿಕಾ ಸುರೇಂದ್ರನ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಅಜಿತ್ ನಟನೆಯ ‘ಯೆನ್ನೈ ಅರಿಂಧಾಲ್’ ಮತ್ತು ‘ವಿಶ್ವಾಸಮ್’ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡರು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.