ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ದಕ್ಷಿಣ ಆಫ್ರಿಕಾದ ‘ದಕ್ಷ’ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿದೆ ಎಂದು ವರದಿಯಾಗಿದೆ. 40 ದಿನಗಳ ಅಂತರದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾನನ್ನಪ್ಪಿದ ಮೂರನೇ ಚೀತಾ ಇದಾಗಿದೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ಮತ್ತು ನಮೀವಿಯಾದಿಂದ ಭಾರತಕ್ಕೆ 20 ಚಿರತೆಗಳನ್ನು ಕರೆತರಲಾಗಿದೆ. ಆದರೆ ಅದರಲ್ಲಿ ಈಗಾಗಲೇ 2 ಚಿರತೆಗಳು ಸಾವನ್ನಪ್ಪಿತ್ತು. ಆದರೀಗ ದಕ್ಷ ಎಂಬ ಚಿರತೆ ಬೇರೆ ಚಿರತೆಯೊಂದಿಗೆ ಕಾದಾಡಿ ಸಾವನ್ನಪ್ಪಿದೆ.
ಮೃತಪಟ್ಟಿರುವ ಚೀತಾದ ಮೈಮೇಲೆ ಗಾಯಗಳಾಗಿವೆ. ವಾಯು ಮತ್ತು ಅಗ್ನಿ ಎಂಬ ಪುರುಷ ಚೀತಾಗಳೊಂದಿಗಿನ ಹೊಡೆದಾಟದಿಂದ ಗಾಯಗೊಂಡು ‘ದಕ್ಷ’ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಹೇಳಿದ್ದಾರೆ.
ಜನವರಿಯಲ್ಲಿ ಸಶಾ ಎಂಬ ಚಿರತೆ ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪಿತ್ತು. ಏಪ್ರಿಲ್‌ನಲ್ಲಿ ಮತ್ತೊಂದು ಚಿರತೆ ಉದಯ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡು ಚಿಕಿತ್ಸೆ ವೇಳೆ ಸಾವನ್ನಪ್ಪಿತು. ಇದೀಗ ದಕ್ಷ ಎಂಬ ಚಿರತೆ ಸಾವನ್ನಪ್ಪಿದೆ.