Recent Posts

Monday, January 20, 2025
ವಾಣಿಜ್ಯಸುದ್ದಿ

ಹೊಸದಾದ ವಿವೋ ವೈ78 5ಜಿ ಫೋನನ್ನು ಲಾಂಚ್ ಗೊಳಿಸಿದ ವಿವೋ ಕಂಪನಿ –ಕಹಳೆ ನ್ಯೂಸ್

ವಿವೋ ಕಂಪನಿ ಹೊಸ ವಿವೋ ವೈ78 5ಜಿ (Vivo Y78 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರAತೆ ಹೊಸ ಹೊಸ ಸ್ಮಾರ್ಟ್ಫೋನುಗಳು ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್‌ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು ಅನಾವರಣ ಮಾಡಿದೆ. ಕೆಲವು ತಿಂಗಳ ತನ್ನ ವೈ ಸರಣಿಯಲ್ಲಿ ವಿವೋ ವೈ78+ 5ಉ ಫೋನ್ ಪರಿಚಯಿಸಿದ್ದ ಕಂಪನಿ ಇದೀಗ ಇದೇ ವೈ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ವಿವೋ ವೈ78 5ಜಿ (Vivo Y78 5G) ಫೋನನ್ನು ಲಾಂಚ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೊ Y78 ಸ್ಮಾರ್ಟ್ಫೋನ್ ಸದ್ಯಕ್ಕೆ ವಿದೇಶದಲ್ಲಿ ಮೂರು ಮಾದರಿಯ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB RAM + 128GB ವೇರಿಯಂಟ್ ಬೆಲೆಯು CNY 1,399, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 16,600 ರೂ. ಇರಬಹುದು. 8GB RAM + 256GB ಸ್ಟೋರೇಜ್ ಮಾದರಿಗೆ CNY 1,999 (ಭಾರತದಲ್ಲಿ 20,120 ರೂ.) ಹಾಗೂ 12GB RAM + 256GB ವೇರಿಯಂಟ್‌ಗೆ CNY 1,999 (23,675 ರೂ.). ಸದ್ಯಕ್ಕೆ ಚೀನಾದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ ಎಂದು ಕಂಪನಿ ಹೇಳಿದೆ.

ಇನ್ನು ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ವಿವೊ Y78 ಸ್ಮಾರ್ಟ್ಫೋನ್ 1,080 x 2,388 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.64 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್‌ನಿಂದ ಕೂಡಿದ್ದು ಮೀಡಿಯಾಟೆಕ್ ಡೈಮ್ಸಿಟಿ 7020 ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ 3 OS ಬೆಂಬಲದೊAದಿಗೆ ಕಾರ್ಯನಿರ್ವಹಿಸಲಿದೆ.

ವಿವೋ Y78 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಆ ಪೈಕಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್ ನಲ್ಲಿ ನೈಟ್ ಮೋಡ್, ಪೋಟ್ರೇðಟ್ ಲೈಟ್ ಎಫೆಕ್ಟ್, ವಿಡಿಯೋ ಫೇಸ್ ಬ್ಯೂಟಿ, ಸೇರಿದಂತೆ ಅನೇಕ ಎಡಿಟಿಂಗ್ ಆಯ್ಕೆಗಳನ್ನು ನೀಡಿರುವುದು ವಿಶೇಷತೆಯಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಬ್ಲೂಟೂತ್ 5.0, 4ಜಿ ಎಲ್ ಟಿಇ, ವೈ-ಫೈ, 5 ಎಂಎA ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಸೈಡ್-ಮೌಂಟೆಡ್ ಫಿಂಗ್‌ಪ್ರಿAಟ್ ಸ್ಕ್ಯಾನರ್ ಅಳವಡಿಸಾಗಿದೆ.