ಇತ್ತೀಚಿನ ದಿನಗಳಲ್ಲಿ ಛತ್ತೀಸ್ಗಢದ ಮಹಾಸಮುಂಡ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ದೆವ್ವದ ಕಾಟವಿದೆ ಎಂಬು ಸುದ್ದಿ ಹರಿದಾಡ್ತಯಿದೆ.
ಹೌದು ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಕಾರಿಡಾರ್ನಲ್ಲಿ ಹುಡುಗಿಯ ನಗು ಕೇಳಿಬರುತ್ತಿದೆ. ಆದರೆ ಕೊಠಡಿಯಿಂದ ಹೊರಗೆ ಬಂದರೆ ಯಾರೂ ಕಾಣುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪೊಲೀಸ್ ತಂಡವೊAದು ಕೂಡ ಹಾಸ್ಟೆಲ್ಗೆ ತೆರಳಿ ತನಿಖೆ ನಡೆಸಿದ್ದು, ಅವರ ಸಮ್ಮುಖದಲ್ಲಿ ನಗುವಿನ ಸದ್ದುಗಳು ಕೇಳಿಬರುತ್ತಿದ್ದವು, ಆದರೆ ಆ ಶಬ್ದದ ಮೂಲವನ್ನು ಹುಡುಕಲು ಅವರಿಗೂ ಸಾಧ್ಯವಾಗಿಲ್ಲ. ಈ ಬಾಲಕರ ಹಾಸ್ಟೆಲ್ನಲ್ಲಿ 54 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಹುಡುಗರಿಗೆ ಶಬ್ದ ಕೇಳಲು ಪ್ರಾರಂಭಿಸಿದಾಗ ಹಾಸ್ಟೆಲ್ನಲ್ಲಿ ಕೇವಲ 5-6 ಹುಡುಗರು ಇದ್ದರು, ಇತರರು ಬೇಸಿಗೆ ರಜೆಗೆ ಮನೆಗೆ ಹೋಗಿದ್ದರು.
ಈ ಬಗ್ಗೆ ವೈದ್ಯಕೀಯ ಕಾಲೇಜು ಡೀನ್ ಯಾಸ್ಮಿನ್ ಖಾನ್, ಇದು ಕೇವಲ ವದಂತಿಯಷ್ಟೇ, ಈ ಘಟನೆಯ ಬಗ್ಗೆ ನನಗೆ ತಿಳಿದಾಗ, ನಾನು ಮಹಾಸಮುಂಡ್ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ತೆರಳಿದ್ದಾರೆ. ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.