Sunday, January 19, 2025
ಸುದ್ದಿಸುಬ್ರಹ್ಮಣ್ಯ

ಬೆತ್ತಲೆ ಓಡಾಡಿ, ರಾತ್ರಿ ವೇಳೆ ಮನೆಗಳ ಡೋರ್ ಬಡಿಯುತ್ತಿದ್ದ ವ್ಯಕ್ತಿಯ ರಕ್ಷಣೆ – ಕಹಳೆ ನ್ಯೂಸ್

ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಪೇಟೆಯಲ್ಲಿ ಬೆತ್ತಲೆ ಓಡಾಡುತ್ತ, ರಾತ್ರಿ ಮನೆಗಳ ಡೋರ್ ಬಡಿಯುತ್ತ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಕೊಪ್ಪಳ ಮೂಲದ ಮಹೇಶ್ ಎಂಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಅಮರ ಚಾರಿಟೇಬಲ್ ಟ್ರಸ್ಟ್ ವತಿಯ ಮನವಿಗೆ ಮೇರೆಗೆ ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಮತ್ತು ದೇವಿಪ್ರಸಾದ್ ಚಿಕ್ಮುಳಿ ಸ್ಪಂದಸಿ ಊರಿಗೆ ಕಳುಹಿಸಿದ ಘಟನೆ ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಪೇಟೆಯಲ್ಲಿ ಬೆತ್ತಲೆ ಓಡಾಡುತಿದ್ದ ವ್ಯಕ್ತಿ ನಂತರ ಗುತ್ತಿಗಾರು ಪೇಟೆಗೆ ಆಗಮಿಸಿ ಬೆತ್ತಲೆ ಓಡಾಡುತಿದ್ದರು. ಈ ಸಂದರ್ಭದಲ್ಲಿ ಅವರನ್ನು ಜೀಪ್ ಚಾಲಕರದ, ವಿನಯ್ ಮಾಡಬಾಕಿಲು, ಕುಶಾಲಪ್ಪ ಕುಳ್ಳಾಜೆ, ಜಗದೀಶ್ ಕಾರ್ಜ, ನೀಲಪ್ಪ ಗೌಡ ಪೈಕ, ವೆಂಕಟ್ ಮನವೊಲಿಸಿ ಮಾಹಿತಿ ಕಲೆ ಹಾಕಿದ್ದರು.. ಅದೇ ದಿನ ಸಂಜೆ ಆ ವ್ಯಕ್ತಿ ಮತ್ತೆ ಸ್ಥಳೀಯ ಮನೆಗಳ ಬಾಗಿಲು ಬಡಿದು ಕೀಟಲೆ ಮಾಡಿದ್ದು ತಿಳಿದು ಬಂದಿತ್ತು. ಮರುದಿನ ಆ ವ್ಯಕ್ತಿಯನ್ನು ಅಮರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಂದ್ರಶೇಖರ ಕಡೋಡಿ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಿ ಎಸ್ ಐ ಅವರ ಸಹಾಯ ಪಡೆದು ಅವರ ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವ್ಯಕ್ತಿ ಗೆ ಸಂಪೂರ್ಣ ಹೊಸ ಬಟ್ಟೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ನೀಡಿದರೆ, ಗುತ್ತಿಗಾರಿನ ಉದ್ಯಮಿ ದೇವಿಪ್ರಸಾದ್ ಚಿಕ್ಮಳಿ ಅವರ ವ್ಯಕ್ತಿ ಊರಿಗೆ ತಲುಪಲು ವಾಹನದ ವ್ಯವಸ್ಥೆ ಮಾಡಿದರು. ವಾಹನ ಚಾಲಕರಾಗಿ ರವೀಂದ್ರ ಪೈಕ ಸಹಕರಿಸಿದ್ದರು. ಟ್ರಸ್ಟ್ ಮತ್ತು ಚಂದ್ರಶೇಖರ ಕಡೋಡಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು