Recent Posts

Sunday, January 19, 2025
ಸುದ್ದಿ

ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ, ಅಧ್ಯಕ್ಷ ಬೈಡೆನ್‌ನಿಂದ ಔತಣ ಕೂಟ – ಕಹಳೆ ನ್ಯೂಸ್

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಜೂನ್‌ನಲ್ಲಿ ಅಮೆರಿಕ ಭೇಟಿ ಕೈಗೊಳ್ಳಲಿದ್ದಾರೆ. ಜೂ.22 ರಂದು ಬೈಡೆನ್‌ರ ಔತಣದಲ್ಲಿ ಭಾಗಿಯಾಗಲಿದ್ದಾರೆ. ಇದು ಬೈಡನ್ ಆಹ್ವಾನದ ಮೇರೆಗೆ ಮೋದಿ ನೀಡುತ್ತಿರುವ ಮೊದಲ ಅಮೆರಿಕ ಭೇಟಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್, ಪ್ರಧಾನಿ ಮೋದಿ ಅವರ ಮುಂಬರುವ ಭೇಟಿಯು ಅಮೆರಿಕ ಮತ್ತು ಭಾರತದ ನಡುವಣ ಆಳ ಮತ್ತು ಆಪ್ತ ಸಂಬoಧ ಹಾಗೂ ಭಾರತ ಮತ್ತು ಅಮೆರಿಕರನ್ನರ ನಡುವಣ ನಂಟಾಗಿರುವ ಕುಟುಂಬ ಮತ್ತು ಸ್ನೇಹ ಸಂಬoಧವನ್ನು ಇನ್ನಷ್ಟುಗಟ್ಟಿಗೊಳಿಸಲಿದೆ. ಪ್ರಧಾನಿ ಮೋದಿ ಅವರ ಭೇಟಿಯು ಮುಕ್ತ, ಸಂಪದ್ಭರಿತ ಮತ್ತು ಇಂಡೋ ಪೆಸಿಫಿಕ್ ವಲಯದ ಕುರಿತ ಉಭಯ ದೇಶಗಳ ಬಾಧ್ಯತೆಯನ್ನು ಇನ್ನಷ್ಟುಬಲಪಡಿಸಲಿದೆ. ಜೊತೆಗೆ ಭೇಟಿಯೂ ರಕ್ಷಣೆ, ಸ್ವಚ್ಛ ಇಂಧನ ಮತ್ತು ಬಾಹ್ಯಾಕಾಶ ವಲಯದಲ್ಲಿನ ದ್ವಿಪಕ್ಷೀಯ ವ್ಯೂಹಾತ್ಮಕ ತಂತ್ರಜ್ಞಾನ ಪಾಲುದಾರಿಕೆಯನ್ನು ಇನ್ನಷ್ಟುವಿಸ್ತರಿಸಲಿದೆ’ ಎಂದಿದ್ದಾರೆ.

ಜೊತೆಗೆ ‘ಉಭಯ ನಾಯಕರು ನಮ್ಮಗಳ ನಡುವಣ ಶೈಕ್ಷಣಿಕ ವಿನಿಮಯ, ವ್ಯಕ್ತಿ-ವ್ಯಕ್ತಿ ಸಂಬAಧ, ಸಮಾನ ಸವಾಲುಗಳಾದ ಹವಾಮಾನ ಬದಲಾವಣೆ, ಆರೋಗ್ಯ ವಲಯದಲ್ಲಿನ ವೃತ್ತಿಪರರ ಕೌಶಲ್ಯ ಅಭಿವೃದ್ಧಿ ಬಗ್ಗೆಯೂ ಚರ್ಚಿಸಲಿದ್ದಾರೆ. ಜೊತೆಗೆ ಜೂನ್ ೨೨ರಂದು ಅಧ್ಯಕ್ಷ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔತಣ ಆಯೋಜಿಸಿದ್ದಾರೆ’ ಎಂದು ಜೀನ್ ಮಾಹಿತಿ ನೀಡಿದ್ದಾರೆ.