ನವದೆಹಲಿ: ಮಾಜಿ ಸಂಸತ್ ಸದ್ಯಸ್ಯೆ ಮತ್ತು ಬಾಲಿವುಡ್ ನಟಿ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಸ್ತಾವವನ್ನು ನೇಪಾಳದ ಸಂಸತ್ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಅವರನ್ನು ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯನ್ನಾಗಿ ನೇಮಿಸಿದೆ.
ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಾಗ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಮತ್ತು ನೇಪಾಳದ ಪ್ರವಾಸೋದ್ಯಮವನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ ಎಂದು ಆಯ್ಕೆಗೂ ಮುನ್ನ ನಿರೀಕ್ಷೆ ಹೊಂದಲಾಗಿತ್ತು.
ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ರಾಯಭಾರಿಯಾಗಿರಲಿದ್ದಾರೆ. ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ. ನೇಪಾಳ ಪ್ರವಾಸೋದ್ಯಮಕ್ಕೆ ಭಾರತ ಪ್ರಮುಖ ಗ್ರಾಹಕ ರಾಷ್ಟ್ರವಾಗಿದೆ.
ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ 2020ರ ವರ್ಷವನ್ನು ‘ವಿಸಿಟ್ ನೇಪಾಳ ಇಯರ್’ ಎಂದು ಆಚರಿಸಲು ನಿರ್ಧರಿಸಿದೆ. ಸುಮಾರು 20 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ಗುರಿಯನ್ನು ಹೊಂದಿದೆ.