Recent Posts

Sunday, January 19, 2025
ಸಿನಿಮಾಸುದ್ದಿ

ಸಿಹಿ ಸುದ್ದಿ ಹಂಚಿಕೊ0ಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ -ಕಹಳೆ ನ್ಯೂಸ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗ್ಲೋಬಲ್ ಸ್ಟಾರ್ ಆಗಿ, ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ.

ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್ ನಟಿಮಣಿಯ ಕೈ ಸೇರಿದೆ. ದೀಪಿಕಾ ನಿರೂಪಕಿಯಾಗಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ದೀಪಿಕಾ ಪಡುಕೋಣೆ ಹೊಸ ಫೋಟೋಶೂಟ್ ಮಾಡಿಸಿದ್ರು. ಹೊಸ ಲುಕ್‌ನಲ್ಲಿ ವಿಶ್ವದಾದ್ಯಂತ ಮಿಂಚಲು ರೆಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ನಟಿ ದೀಪಿಕಾ ಆಗಾಗ ಫೋಟೋಗಳನ್ನು ಹಂಚಿಕೊಳ್ತಾರೆ.

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಟೈಮ್ ಮ್ಯಾಗಜೀನ್ನ ಕವರ್ ಪೇಜ್ ಅನ್ನು ಅಲಂಕರಿಸಿದ್ದಾರೆ. ಈ ಮ್ಯಾಗಜಿನ್ ವರ್ಲ್ಡ್ ವೈಲ್ಡ್ ಆಗಿದೆ. ದೀಪಿಕಾ ಪಡುಕೋಣೆ ಈ ಮಾಧ್ಯಮದ ಮೂಲಕ ಇಡೀ ಜಗತ್ತನ್ನು ತಲುಪುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಮೆAಟಲ್ ಹೆಲ್ತ್ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ದೀಪಿಕಾ ಪಡುಕೋಣೆ ಅವರಿಗೆ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿ ನೀಡಿ ಗೌರವಿಸಿದೆ. ನಟಿ ದೀಪಿಕಾ ಪಡುಕೋಣೆ ಕೂಡ ಖಿನ್ನತೆಗೆ ಒಳಗಾಗಿದ್ದರು.

ನಟಿ ದೀಪಿಕಾ ಖಿನ್ನತೆಯಂತಹ ಸಮಸ್ಯೆಯನ್ನು ಎದುರಿಸಿದರು. ಬಳಿಕ ದೀಪಿಕಾ ಬಹಳ ಕಷ್ಟಪಟ್ಟು ಖಿನ್ನತೆಯಿಂದ ಹೊರಬಂದಿದ್ದಾರೆ. ತನ್ನ ಜೀವನವನ್ನು ಹೊಸದಾಗಿ ಪ್ರಾರಂಭಿಸಿದರು. ಖಿನ್ನತೆಯಿಂದ ಹೊರಬಂದ ನಂತರ ದೀಪಿಕಾ ಮೆಂಟಲ್ ಫೌಂಡೇಶನ್ ಪ್ರಾರಂಭಿಸಿದರು.

ಬಳಿಕ ದೀಪಿಕಾ ಇತರರಿಗೆ ಸಹಾಯ ಮಾಡಲು ನಿರ್ಧರಿಸಿದರು. ಇದಕ್ಕಾಗಿಯೇ ದೀಪಿಕಾ ಮೆಂಟಲ್ ಫೌಂಡೇಶನ್ ಪ್ರಾರಂಭಿಸಿದರು. ಈ ಮೂಲಕ ಅನೇಕರಿಗೆ ನಟಿ ದೀಪಿಕಾ ಪಡುಕೋಣೆ ಸಹಾಯ ಮಾಡಿದ್ದಾರೆ. ಅವರು ದೀಪಿಕಾ ಅವರ ಹೊಸ ಫೋಟೋಶೂಟ್‌ನ ಕೆಲವು ಫೋಟೋಗಳು ಮತ್ತು ಬಿಟಿಎಸ್ ಫೋಟೋ ಹಾಗೂ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ. ಡಿಪ್ಪಿ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಲೇಡಿ ಬಾಸ್ ಲುಕ್‌ನಲ್ಲಿರುವ ದೀಪಿಕಾ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ವಿಶ್‌ಗಳ ಸುರಿಮಳೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ದೀಪಿಕಾ ಪಡುಕೋಣೆ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.