ಮೆಡಿಟರೇನಿಯನ್ ಸಮುದ್ರದ ಆಳದಲ್ಲಿ 7,000 ವರ್ಷಗಳ ಹಳೆಯ ರಸ್ತೆಯನ್ನು ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ. ಕ್ರೊಯೇಷಿಯನ್ ದ್ವೀಪದಲ್ಲಿರುವ ಕೊರ್ಕುಲ ದ್ವೀಪದ ಕರಾವಳಿಯಲ್ಲಿ ನೆಲೆಸಿದ್ದ ಹ್ವಾರ್ ಸಂಸ್ಕøತಿಗೆ ಈ ರಸ್ತೆ ಸೇರಿದ್ದಾಗಿದೆ. ನಾಲ್ಕು ಮೀಟರ್ ಉದ್ದದ ಈ ಸಂಪರ್ಕ ರಸ್ತೆಯನ್ನು ಅಚ್ಚುಕಟ್ಟಾಗಿ ಜೋಡಿಸಲಾದ ಕಲ್ಲಿನ ಚಪ್ಪಡಿಗಳಿಂದ ನಿರ್ಮಿಸಲಾಗಿದೆ.
“ಕ್ರಿ.ಪೂ. 5,000 ಸುಮಾರಿನಲ್ಲಿ ನೆಲೆಸಿದ್ದ ಹ್ವಾರ್ ನಾಗರಿಕತೆಗೆ ಈ ರಸ್ತೆ ಸೇರಿದ್ದಾಗಿದೆ. ಇಲ್ಲಿ ನುರಿತ ರೈತರು ಮತ್ತು ದನಗಾಹಿಗಳು ಕರಾವಳಿ ಹಾಗೂ ಸಮೀಪದ ದ್ವೀಪಗಳಲ್ಲಿ ಸಣ್ಣ ಮತ್ತು ಪ್ರತ್ಯೇಕ ಸಮುದಾಯಗಳಲ್ಲಿ ವಾಸಿಸುತ್ತಿದ್ದರು. 7,000 ವರ್ಷಗಳ ಹಿಂದೆ ಈ ರಸ್ತೆಯನ್ನು ಸಂಪರ್ಕಕ್ಕಾಗಿ ಬಳಸುತ್ತಿದ್ದರು. ಕಾಲಾನಂತರ ಇದು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಹೋಯಿತು,’ ಎಂದು ಜದಾರ್‍ನ ಕ್ರೊಯೇಷಿಯನ್ ವಿಶ್ವವಿದ್ಯಾಲಯದ ತಜ್ಞರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೆಡಿಟರೇನಿಯನ್ ಸಮುದ್ರದಲ್ಲಿ ಹುದುಗಿ ಹೋಗಿರುವ ಹ್ವಾರ್ ಸಂಸ್ಕೃತಿ ಮತ್ತು ಅಂದಿನ ಜನಜೀವನದ ಕುರಿತು ಪುರಾತತ್ವ ತಜ್ಞರು ಸಂಶೋಧನೆ ಮುಂದುವರಿಸಿದ್ದಾರೆ.