Recent Posts

Monday, January 20, 2025
ಸುದ್ದಿ

ಅಭ್ಯರ್ಥಿಗಳಿಗೆ ಗೆಲುವಿನ ಚಿಂತೆ : ಮತದಾರರಿಗೆ ಬೆಟ್ಟಿಂಗ್ ಚಿಂತೆ..!? –ಕಹಳೆ ನ್ಯೂಸ್

202 ರ ರಾಜ್ಯ ಸಾರ್ವತ್ರಿಕ ಚುನಾವಣೆ ಮುಗಿದು ರಾಜಕೀಯ ನೇತಾರರು ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು ಚುನಾವಣೆ ಆಗಿರುವ ಮತಗಳೆಷ್ಟು, ಅದರಲ್ಲಿ ಪುರುಷ ಮತ್ತು ಮಹಿಳಾ ಮತಗಳೆಷ್ಟು, ಜಾತಿವಾರು ಚುನಾವಣೆ ಯಾದ ಮತಗಳೆಷ್ಟು, ಯಾರ ಪರವಾಗಿ ಜನರು ಮಾತನಾಡುತ್ತಿದ್ದಾರೆ ಹೀಗೆ ನಾನಾ ರೀತಿಯ ಲೆಕ್ಕಾಚಾರದ ಪ್ರಕಾರ ಗೆಲುವಿನ ಸೂಕ್ಷ್ಮತೆಯನ್ನು ನಿರ್ಧರಿಸುವ ಪ್ರಯತ್ನಗಳು ನಡೆಯುತ್ತಿವೆ.

ಮತದಾರ ಮತದಾನ ಮಾಡುವ ಮೂಲಕ ಆತನ ಮಹತ್ತರವಾದ ಜವಬ್ದಾರಿಯನ್ನು ಮುಗಿಸಿದ್ದಾನೆ, ಇನ್ನೇನು ಇದ್ದರೂ ಅಭ್ಯರ್ಥಿಗಳಿಗೆ ಬಿಟ್ಟದ್ದು, ಯಾರು ವಿಜಯಸಾಲಿಯಾಗುತ್ತಾರೆ ಎಂಬುದನ್ನು ಕಾದುನೋಡುವ ತವಕ. ಮತದಾರ ಹಾಕಿದ ಪ್ರತಿಯೊಂದು ಮತಗಳು ಮತಪೆಟ್ಟಿಗೆಯೊಳಗೆ ರಾಜಕೀಯ ಭವಿಷ್ಯ ನಿರ್ಧಾರಕ್ಕಾಗಿ ಭದ್ರವಾಗಿ ಕುಳಿತಿದೆ.

ಕಳೆದ ಒಂದು ತಿಂಗಳ ಮತಬೇಟೆಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಆದರೆ ಯಾರಿಗೆ ಗೆಲುವು ಯಾರಿಗೆ ಸೋಲು ಎಂಬುದು ನಿರ್ಧಾರವಾಗುವುದು ಮೇ. 13 ರಂದು ಶನಿವಾರ. ಮತದಾನವಾದ ಬಳಿಕ ಅಭ್ಯರ್ಥಿಗಳ ಜೊತೆಗೆ ಕಾರ್ಯಕರ್ತರ ಎದೆ ಗಡಗಡ ಎನ್ನಲು ಶುರುವಾಗಿದೆ ವಿಜಯದ ಬಾಗಿಲು ಯಾರ ಪಾಲಿಗೆ ತೆರೆಯುತ್ತದೆ ಎಂಬುದಕ್ಕೆ ಎರಡು ದಿನ ಕಾಯಬೇಕು.ಅಲ್ಲಿಯವರೆಗೆ ಏರ್ ಗೆಂದುವೆರ್ ಏರ್ ಸೋಪುವೆರ್ ಹೀಗೆ ಕ್ಷಣಕ್ಷಣಕ್ಕೂ ಜನರ ಕುತೂಹಲ ಕೆರಳಿಸುವ ಮೂಲಕ ಒಂದು ರೀತಿಯ ಹುಚ್ಚರಾಗುತ್ತಾರೆ.

ಅದರ ನಡುವೆ ಬೆಟ್ಟಿಂಗ್‌ಗಳು ಶುರುವಾಗಿದೆ, ಸಮದಲ್ಲಿ, 50 ಪೈಸೆ,80 ಪೈಸೆ,70 ಪೈಸೆ ಹೀಗೆ ಹಲವು ವಿಧದಲ್ಲಿ ಬೆಟ್ಡಿಂಗ್‌ಗಳು ಶುರುವಾಗಿದೆ. ಅಭ್ಯರ್ಥಿ ಗಳಿಗೆ ಗೆಲುವಿನ ಚಿಂತೆಯಾದರೆ, ಕೆಲವರಿಗೆ ಬೆಟ್ಟಿಂಗ್ ಚಿಂತೆ..ಹೀಗೆ ಯಾವುದಕ್ಕೂ ಮೇ. 13 ರ ವರೆಗೆ ಕಾಯಬೇಕಾಗಿದೆ.