Monday, January 20, 2025
ಸುದ್ದಿ

ದೇಹದ ಭಾಗವನ್ನ ಪದಾರ್ಥ ಮಾಡಿ ತಾನೂ ಸವಿದು ಪ್ರಿಯಕರನಿಗೂ ತಿನಿಸಿದ ಯುವತಿ..! – ಕಹಳೆ ನ್ಯೂಸ್

ನಾನ್‌ವೆಜ್ ಪ್ರಿಯರು ನೀವಾಗಿದ್ರೆ.. ಯಾವತ್ತಾದ್ರೂ ನಿಮ್ಮ ದೇಹದ ಭಾಗವನ್ನ ನೀವು ಪದಾರ್ಥ ಮಾಡಿ ತಿನ್ನೋ ಯೋಚನೆ ಮಾಡಿದ್ದೀರಾ..? ಅರೇ ಛೀ ಏನ್ ಹೇಳ್ತಾ ಇದ್ದೀರಾ ನೀವು..? ಅಂತ ಕೇಳ್ತೀರಾ.. ನಾವೆಲ್ಲ ಎಷ್ಟೇ ಆಹಾರ ಪ್ರಿಯರಾದರೂ ನಮ್ಮ ದೇಹದ ಅಂಗಾ0ಗವನ್ನ ತಿನ್ನೋ ಯೋಚನೆ ಮಾಡೋದಿಲ್ಲ ಬಿಡಿ. ಆದರೆ ಸ್ಪೇನ್‌ನ ಯುವತಿಯೊಬ್ಬಳು ತನ್ನ ದೇಹದ ಭಾಗವನ್ನ ಪದಾರ್ಥ ಮಾಡಿ ತಾನೂ ಸವಿದು ತನ್ನ ಬಾಯ್‌ಫ್ರೆಂಡ್‌ಗೂ ಕೊಟ್ಟಿದ್ದಾಳೆ.

ಸ್ಪೇನ್‌ನ ನಿವಾಸಿ ಟ್ವಿಚ್ ಸ್ಟ್ರೀಮರ್ ಪೌಲಾ ಗೋನು ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವಳ ಕಾಲಿನ ಭಾಗದಿಂದ ತೆಗೆದ ಮೂಳೆಯ ಸಣ್ಣ ಮಾದರಿಯನ್ನು ಮನೆಗೆ ಕೊಂಡೊಯ್ಯಲು ಬಯಸುತ್ತೀರಾ ಎಂದು ವೈದ್ಯರು ಅವಳನ್ನು ಕೇಳಿದರು. ಅದರಂತೆ ಯುವತಿ ಮೊಣ ಕಾಲಿನ ಭಾಗವನ್ನು ತೆಗೆದುಕೊಂಡು ಬಂದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಸ್ತ್ರಚಿಕಿತ್ಸೆಯ ನಂತರ ಪೌಲಾಗೆ ತನ್ನ ಕಾಲಿನ ಮೂಳೆ ತುಂಡನ್ನು ತಿನ್ನುವ ಬಯಕೆ ಉಂಟಾಗಿದೆ. ಈ ಕುರಿತಾಗಿ ತನ್ನ ಗೆಳೆಯನೊಂದಿಗೆ ತಮಾಷೆ ಮಾಡಲು ಪ್ರಾರಂಭಿಸಿದಳು. ಆದರೆ ಒಂದು ದಿನ ತನ್ನ ಕಾಲಿನ ಮೂಳೆಯನ್ನ ಪಾಸ್ತಾಕ್ಕೆ ಸೇರಿಸಿ ಒಂದು ಪದಾರ್ಥವನ್ನೇ ತಯಾರಿಸಿ ಸೇವಿಸಿದ್ದಾಳೆ.

“ಅದು ನನ್ನ ದೇಹದ ಭಾಗವಾಗಿದೆ ಮತ್ತು ನಾನು ಅದನ್ನು ಮತ್ತೆ ನನ್ನ ದೇಹದಲ್ಲಿ ಇಡಬೇಕಾಗಿತ್ತು ಹೀಗಾಗಿ ತಿನ್ನಲು ಬಯಸಿದೆ. ನಾನು ಮಂಡಿಚಿಪ್ಪನ್ನು ತಿಂದೆ. ನನ್ನ ಗೆಳೆಯನಿಗೆ ಮೂಳೆಯಿಂದ ತಯಾರಿಸಿದ ಇನ್ನೊಂದು ಪದಾರ್ಥವನ್ನು ನೀಡಿದೆ” ಎಂದಿದ್ದಾಳೆ. ಈ ಕುರಿತಾಗಿ ಈಕೆಯೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾಳೆ.

ಟ್ವಿಚ್ ಸ್ಟ್ರೀಮರ್ ಪೌಲಾ ಅವರು ಸೋಶಿಯಲ್ ಮೀಡಿಯಾದಲ್ಲಿ 228,000 ಕ್ಕೂ ಹೆಚ್ಚು ಫಾಲೊವರ್ಸ್ ಹೊಂದಿದ್ದಾರೆ. ಈಕೆ ತನ್ನ ದೇಹದ ಭಾಗವನ್ನು ತಿಂದಿರುವ ವಿಚಾರ ತಿಳಿಸುತ್ತಿದ್ದಂತೆ ನೆಟ್ಟಿಗರು ಯುವತಿಯ ಈ ವಿಚಿತ್ರ ವರ್ತನೆ ಕುರಿತಾಗಿ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.