Monday, January 20, 2025
ಸುದ್ದಿ

ಸ್ಪೈಸಿ ಸ್ಪೈಸಿ ಚಿಕನ್ ತಿಂದು ಟ್ರೋಲಿಗರಿಗೆ ಆಹಾರವಾದ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ಕಿರಿಕ್ ಪಾರ್ಟಿ ಬೆಡಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅದೆಷ್ಟೋ ಬಾರಿ ಟ್ರೋಲಿಗರ ಬಾಯಿಗೆ ಆಹಾರವಾಗ್ತಾನೆ ಬಂದಿದ್ದಾರೆ. ಇದೀಗ ರಶ್ಮಿಕಾ ನಾನ್‌ವೆಜ್ – ವೆಜ್ ನಡುವೆ ಸಿಕ್ಕಿಹಾಕಿಕೊಂಡು ವಿವಾದದ ಬಾಯೋಳಗೆ ಬಿದ್ದಿದ್ದಾರೆ. ಈ ವಿವಾದಕ್ಕೆ ಕಾರಣವಾಗಿರೋದು ಸ್ಪೈಸಿ ಸ್ಪೈಸಿ ಚಿಕನ್..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಶ್ಮಿಕಾ ಅವರು ಚಿಕನ್ ತಿಂದು ವಿವಾದದ ಸುಳಿಗೆ ಮತ್ತೊಮ್ಮೆ ಬಿದ್ದಿದ್ದಾರೆ. ನಿಮಗೆ ಗೊತ್ತಿರುವ ಹಾಗೇ ರಶ್ಮಿಕಾ ಅವರು ಅನೇಕ ಬ್ರ‍್ಯಾಂಡ್‌ಗಳಿಗೆ ಜಾಹೀರಾತು ನೀಡುತ್ತಾರೆ. ಇತ್ತೀಚೆಗೆ ಜಪಾನೀಸ್ ಫ್ಯಾಶನ್ ಬ್ರ‍್ಯಾಂಡ್ ಒಂದಕ್ಕೆ ರಾಯಭಾರಿಯಾಗಿದ್ದಾರೆ. ಅಲ್ಲದೆ, ಫುಡ್ ಐಟಂ ಒಂದರ ಜಾಹೀರಾತುವಿನಲ್ಲಿ ನಟಿಸಿದ್ದಾರೆ. ಪ್ರಖ್ಯಾತ ರಸಂ  ಬ್ರ‍್ಯಾಂಡ್ ಜಾಹೀರಾತುವಿನಲ್ಲಿ ರುಚಿಕರವಾದ ಮಸಾಲೆಭರಿತ ಚಿಕನ್ ತಿನ್ನುತ್ತಿರುವ ದೃಶ್ಯವಿದೆ. ಇದೇ ದೃಶ್ಯ ಇದೀಗ ರಶ್ಮಿಕಾರನ್ನು ಟ್ರೋಲ್‌ಗೆ ಗುರಿಯಾಗಿಸಿದೆ.

ಜಾಹೀರಾತು ವಿಡಿಯೋವನ್ನು ರಶ್ಮಿಕಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಸಹ ಆಗಿದೆ. ಆದರೆ, ರಶ್ಮಿಕಾ ಅವರು ಈ ಹಿಂದಿನ ಅನೇಕ ಸಂರ‍್ಶನಗಳಲ್ಲಿ ತಾವೊಬ್ಬ ಸಸ್ಯಹಾರಿ ಎಂದು ಹೇಳಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಹಳೆಯ ವಿಡಿಯೋವನ್ನು ಎಳೆದುತಂದು ರಶ್ಮಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.

‘ನೀವು ಜನರನ್ನು ಮಂಗರನ್ನಾಗಿಸಬೇಡಿ. ಈ ಹಿಂದೆ ನಾನು ಸಸ್ಯಹಾರಿ ಎಂದು ಹೇಳಿ, ಈಗ ಮಾಂಸವನ್ನು ಸೇವಿಸುತ್ತಿದ್ದೀರಾ, ನೀವು ಜನರಿಗೆ ಮೋಸ ಮಾಡಬೇಡಿ’ ಎಂದು ರಶ್ಮಿಕಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕುಂತ್ರೂ ನಿಂತ್ರೋ ಸದಾ ಸುದ್ದಿಯಲ್ಲಿರುವ ರಶ್ಮಿಕಾ ಇದೀಗ ಚಿಕನ್ ವಿಚಾರದಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.