Sunday, January 19, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಬೆಳ್ತಂಗಡಿಸುದ್ದಿಸುಬ್ರಹ್ಮಣ್ಯಸುಳ್ಯ

ದ.ಕ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಉತ್ತಮ ಮಳೆ, ಇಂದೂ ಮಳೆ ಸಾಧ್ಯತೆ..! –ಕಹಳೆ ನ್ಯೂಸ್

ಮಂಗಳೂರು, ಉಡುಪಿ ನಗರ ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಗುರುವಾರ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಕಾದು ಕೆಂಡದAತಾಗಿದ್ದ ಭೂಮಿ ತುಸು ತಂಪಾಗಿದೆ

ಮAಗಳೂರು ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹನಿ ಮಳೆಯಾಗಿತ್ತೇ ವಿನಾ ಬಿರುಸಿನ ಮಳೆಯಾಗಿರಲಿಲ್ಲ. ನಗರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡದಿಂದ ಕೂಡಿದ ವಾತಾವರಣ ಮತ್ತು ಉರಿ ಸೆಕೆ ಇತ್ತು. ರಾತ್ರಿ ಸುಮಾರು 8 ಗಂಟೆಗೆ ಸಿಡಿಲು, ಮಿಂಚು ಸಹಿತ ಉತ್ತಮ ಮಳೆ ಸುರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ, ಧರ್ಮಸ್ಥಳ, ಮಡಂತ್ಯಾರು, ಕುವೆಟ್ಟು, ಗೇರುಕಟ್ಟೆ, ನಿಡ್ಲೆ, ವೇಣೂರು, ಉಪ್ಪಿನಂಗಡಿ, ಇಳಂತಿಲ, ಕಲ್ಲೇರಿ, ಕುಪ್ಪೆಟ್ಟಿ, ತಣ್ಣಿರುಪಂತ, ಪೆರ್ನೆ, ಸುಬ್ರಹ್ಮಣ್ಯ, ಸುಳ್ಯ, ಬೆಳ್ಳಾರೆ, ಕಡಬ, ಐನೆಕಿದು, ಕೊಲ್ಲಮೊಗ್ರು, ಪಂಜ, ಎಡಮಂಗಲ, ಪುತ್ತೂರು, ಬೆಟ್ಟಂಪಾಡಿ, ಪಾಣಾಜೆ, ಬಂಟ್ವಾಳ, ಬಿ.ಸಿ. ರೋಡು, ಪುಂಜಾಲಕಟ್ಟೆ, ಸರಪಾಡಿ, ಪುಣಚ, ವಿಟ್ಲ, ಸೇರಾಜೆ ಸಂಪ್ಯ, ಬದಿಯಡ್ಕ, ಸಹಿತ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಪಿಲಿಚಂಡಿಕಲ್ಲು ಬಳಿ ರಸ್ತೆಗೆ ಮರಬಿದ್ದು ಕೆಲ ತಾಸು ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಅಲ್ಲಲ್ಲಿ ಮರ ಬಿದ್ದು, ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆಯಲ್ಲಿ ಗುರುವಾರ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಕಾಪು, ಶಿರ್ವ, ಉದ್ಯಾವರ, ಕಟಪಾಡಿ, ಪಡುಬಿದ್ರಿ ಸುತ್ತಮುತ್ತ ಸಂಜೆ ಸುಮಾರಿಗೆ ಗುಡುಗು-ಸಹಿತ ಕೆಲಕಾಲ ಮಳೆಯಾಗಿದೆ. ರಾತ್ರಿ 7 ಗಂಟೆ ಅನಂತರ ನಗರದ ಸುತ್ತಮುತ್ತ ಕೆಲಕಾಲ ಮಳೆಯಾಗಿದೆ.

ಇನ್ನು ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾದ ಪರಿಣಾಮ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕೆಲ ತಾಸು ವಿದ್ಯುತ್ ಕೈಕೊಟ್ಟಿತ್ತು.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ 12ರಂದು ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಿರುವ ಸಾಧ್ಯತೆ ಇದೆ.

ಕರಾವಳಿ ಭಾಗದಲ್ಲಿ ಉರಿ ಸೆಕೆ ಮತ್ತು ಬಿಸಿಲು ಮುಂದುವರಿದಿದ್ದು, ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದೆ. ಮಂಗಳೂರು ನಗರದಲ್ಲಿ ಗುರುವಾರ 35.2 ಡಿ.ಸೆ. ಗರಿಷ್ಠ ಮತ್ತು 26.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ 1 ಡಿ.ಸೆ. ಹೆಚ್ಚು ಇತ್ತು.