Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು ಕದ್ರಿ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಲು ಯತ್ನಿಸಿದ ಅನ್ಯಮತೀಯ ಯುವಕರು – ಕಹಳೆ ನ್ಯೂಸ್

ಮಂಗಳೂರು :  ಮಂಗಳೂರು ನಗರದ ಕದ್ರಿ ದೇಗುಲಕ್ಕೆ ಅನ್ಯಮತೀಯ ಮೂವರು ಯುವಕರು ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ
ನಿನ್ನೆ ರಾತ್ರಿ 10.30 ರ ವೇಳೆಗೆ ಕೆಎ19 ಎಚ್‌ಎಲ್ 9170 ನೋಂದಣಿಯ ಬೈಕ್‌ನಲ್ಲಿ ಬಂದ ಮೂವರು ಯುವಕರು ಕದ್ರಿ ದೇವಸ್ಥಾನದ ಬಳಿ ಬಂದು ನೇರವಾಗಿ ಅಂಗಣದ ಸುತ್ತು ಹೊಡೆದಿದ್ದಾರೆ. ನಂತರ ಅಲ್ಲೇ ಬೈಕ್ ನಿಲ್ಲಿಸಿ ನೇರವಾಗಿ ದೇವಸ್ಥಾನದ ಒಳಗೆ ಹೋಗಲು ಯತ್ನಿಸಿದ್ದಾರೆ.


ಈ ವೇಳೆ ಅಲ್ಲೇ ಇದ್ದ ವಾಚ್‌ಮೆನ್ ತಡೆಯಲು ಯತ್ನಿಸಿದ್ದಾರೆ. ಆದನ್ನು ಲೆಕ್ಕಿಸದ ಯುವಕರು ನೇರವಾಗಿ ದೇವಾಲಯ ನುಗ್ಗಲು ಯತ್ನಿಸಿದ್ದಾರೆ. ಬಳಿ ಸ್ಧಳೀಯರು ಆಗಮಿಸಿ ತಕ್ಷಣ ಈ ಆರೋಪಿಗಳನ್ನು ಕದ್ರಿ ಪೊಲೀಸರಿಗೊಪ್ಪಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವಸ್ಥಾನದ ಪಾರ್ಕಿಂಗ್ ಬಳಿ ವಾಹನ ನಿಲ್ಲಿಸಿ ದೇವರ ದರ್ಶನಕ್ಕೆ ತೆರಳುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ಮಾತ್ರ ವಾಹನ ದೇವಸ್ಥಾನದ ಅಂಗಣದ ಬಳಿ ಪ್ರವೇಶಿಸಲು ಅವಕಾಶವಿದೆ. ಆದರೆ ನಿನ್ನೆ ರಾತ್ರಿ ಈ ಯುವಕರು ನೇರವಾಗಿ ಬೈಕ್‌ನಲ್ಲಿ ಅಂಗಣಕ್ಕೆ ಹೇಗೆ ಬಂದಿದ್ದಾರೆ. ಇದು ಭದ್ರತಾ ವೈಫಲ್ಯ ಎಂದು ಸ್ಥಳೀಯರು ದೂರಿದ್ದಾರೆ.
ಈ ದೇವಸ್ಥಾನ ಉಗ್ರರ ಕರಿ ನೆರಳು ಇದ್ದು, ಕೆಲ ತಿಂಗಳ ಹಿಂದೆ ಶಾರೀಕ್ ಎಂಬ ಆರೋಪಿ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸುವ ಸಲುವಾಗಿ ರಿಕ್ಷಾದಲ್ಲಿ ಬರುತ್ತಿರುವಾಗ ನಾಗುರಿ ಬಳಿ ರಿಕ್ಷಾದಲ್ಲಿ ಸ್ಪೋಟಗೊಂಡಿತ್ತು. ಈ ಬಗ್ಗೆ ಸ್ವತಃ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಘಟನೆ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಒತ್ತಾಯಿಸಿದ್ದಾರೆ.