Recent Posts

Sunday, January 19, 2025
ಕ್ರೀಡೆಸುದ್ದಿ

ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ….? –ಕಹಳೆ ನ್ಯೂಸ್

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ 56 ಪಂದ್ಯಗಳು ಮುಕ್ತಾಯಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಸುಲಭವಾಗಿ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಾಗುತ್ತಿವೆ. ಗುರುವಾರ ನಡೆದ ಕೋಲ್ಕತ್ತಾ ನೈಡ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಮುಖಾಮುಖಿಯಲ್ಲಿ ಆರ್‌ಆರ್ 9 ವಿಕೆಟ್‌ಗಳ ಜಯ ಕಂಡಿತು. ಇಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (MI vs GT) ಸೆಣೆಸಾಟ ನಡೆಸಲಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು ಪ್ಲೇ ಆಫ್‌ಗೆ ಬಹುತೇಕ ಕಾಲಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಸೋಲುಂಡು +0.951 ರನ್‌ರೇಟ್‌ನೊಂದಿಗೆ 16 ಅಂಕ ಸಂಪಾದಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎAಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 15 ಅಂಕ ಸಂಪಾದಿಸಿದೆ. +0.493 ರನ್‌ರೇಟ್ ಹೊಂದಿದೆ.

ಕೆಕೆಆರ್ ವಿರುದ್ಧ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 12 ಪಂದ್ಯಗಳಲ್ಲಿ ಆರು ಗೆಲುವು, ಆರು ಸೋಲುಂಡು +0.633ರನ್‌ರೇಟ್‌ನೊಂದಿಗೆ 12 ಅಂಕ ಸಂಪಾದಿಸಿದೆ.
ಮುAಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿದ 11 ಪಂದ್ಯದಲ್ಲಿ 5 ಸೋಲು, ಆರು ಗೆಲುವು ಕಂಡು 12 ಅಂಕ ಸಂಪಾದಿಸಿ -0.255 ರನ್‌ರೇಟ್ ಹೊಂದಿದೆ.

ಲಖನೌ ಸೂಪರ್ ಜೇಂಟ್ಸ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು 11 ಅಂಕ ಸಂಪಾದಿಸಿ +0.294 ರನ್‌ರೇಟ್ ಹೊಂದಿದೆ.

ಕೆಕೆಆರ್ ಸೋತ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಸ್ಥಾನ ಮೇಲೇರಿ ಆರನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್‌ರೇಟ್ ಹೊಂದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ 12 ಪಂದ್ಯಗಳಲ್ಲಿ ಐದು ಗೆಲುವು, ಏಳರಲ್ಲಿ ಸೋಲುಂಡು -0.357 ರನ್‌ರೇಟ್‌ನೊಂದಿಗೆ 10 ಅಂಕ ಸಂಪಾದಿಸಿದೆ.

ಪAಜಾಬ್ ಕಿಂಗ್ಸ್ ಆಡಿದ 11 ಪಂದ್ಯಗಳಲ್ಲಿ ಆರು ಸೋಲು- ಐದು ಜಯ ಕಂಡು 10 ಅಂಕ ಹೊಂದಿ -0.441ರನ್‌ರೇಟ್‌ನೊಂದಿಗೆ ಏಳನೇ ಸ್ಥಾನಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯದಲ್ಲಿ ಆರರಲ್ಲಿ ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0.472 ರನ್‌ರೇಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ, ಏಳು ಪಂದ್ಯಗಳಲ್ಲಿ ಸೋಲುಂಡು 8 ಅಂಕ ಸಂಪಾದಿಸಿ -0.605 ರನ್‌ರೇಟ್ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ ಆರು ಅರ್ಧಶತಕ ಸಿಡಿಸಿ ಒಟ್ಟು 576 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್ ದ್ವಿತೀಯ ಸ್ಥಾನದಲ್ಲಿದ್ದು ಫಾಫ್‌ಗಿಂತ 1 ರನ್ ಹಿಂದೆಯಿದ್ದಾರಷ್ಟೆ. ಇವರು ಆಡಿದ 12 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ, 1 ಶತಕ ಸಿಡಿಸಿ ಒಟ್ಟು 575 ರನ್ ಕಲೆಹಾಕಿದ್ದಾರೆ. ಗುಜರಾತ್ ತಂಡದ ಶುಭ್‌ಮನ್ ಗಿಲ್ ಮೂರನೇ ಸ್ಥಾನಕ್ಕೆ ಜಿಗಿದಿದ್ದು 11 ಪಂದ್ಯಗಳಿAದ 469 ರನ್ ಗಳಿಸಿದ್ದಾರೆ.