Friday, November 22, 2024
ಸುದ್ದಿ

ವಾಹನ ತಡೆಗಟ್ಟಿದ ಸ್ಥಳೀಯರು-ಪೊಲೀಸರಿಂದ ಬಿತ್ತು ಲಾಠಿಚಾರ್ಜ್..! – ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮತಗಟ್ಟೆಯಲ್ಲಿ ಬುಧವಾರ ಮತದಾನ ವಿಳಂಬವಾಗಿದ್ದು ಡಿ-ಮಸ್ಟರಿಂಗ್ ಕೇಂದ್ರಕ್ಕೆ ಹೊರಟ ವಾಹನವನ್ನು ಸ್ಥಳೀಯರು ತಡೆಗಟ್ಟಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದರಿಂದಾಗಿ ಕೆಲವು ಅಮಾಯಕರಿಗೆ ಲಾಠಿ ಏಟು ಬಿತ್ತು.

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು, ಇದರಿಂದಾಗಿ ಮತದಾನ ಸುಮಾರು 3 ಗಂಟೆ ತಡವಾಗಿತ್ತು. ಬದಲಿ ವ್ಯವಸ್ಥೆಯಾದ ಬಳಿಕ ಮತದಾನ ಪ್ರಾರಂಭಗೊAಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರೂ ಮತಗಟ್ಟೆಗಳಲ್ಲಿ ಮತಯಂತ್ರಗಳು ನಿಧಾನವಾಗಿ ಕಾರ್ಯನಿರ್ವಹಿಸಿದ ಕಾರಣ ಮತದಾರರು ತಾಸುಗಟ್ಟಲೆ ಕಾಯಬೇಕಾಯಿತು. ಸಂಜೆ 6 ಗಂಟೆಗೆ 150ಕ್ಕೂ ಮಿಕ್ಕಿ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ 8 ಗಂಟೆವರೆಗೆ ಮತದಾನ ನಡೆಯಿತು.

ಬಳಿಕ ಪಕ್ಷಗಳ ಏಜೆಂಟ್‌ಗಳನ್ನು ಹೊರಗೆ ಕಳುಹಿಸಿದ ಮತಗಟ್ಟೆ ಅಧಿಕಾರಿಗಳು ಸುಮಾರು 1 ಗಂಟೆ ಕಾಲ ದಾಖಲೆಗಳನ್ನು ಬರೆದರು. ಏತನ್ಮಧ್ಯೆ ಮಳೆ ಶುರುವಾಗಿ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಅಧಿಕಾರಿಗಳು ಮತದಾನದ ದಾಖಲೆ ಬರೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ಸಮಸ್ಯೆ ಎದುರಿಸಿದರು. ಮೊಬೈಲ್ ಬೆಳಕಿನಲ್ಲಿ ಅಧಿಕಾರಿಗಳು ದಾಖಲೆಗಳನ್ನು ಬರೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮತದಾನ ಮುಗಿದ ಬಳಿಕವೂ ಅಧಿಕಾರಿಗಳು ಹೊರಡದಿರುವುದನ್ನು ಕಂಡು ಜನ ಗಲಾಟೆ ಮಾಡಿದರು. ಮತದಾನದಲ್ಲಿ ಅವ್ಯವಹಾರವಾಗಿದೆ ಎಂದೂ ಕೆಲವರು ಗಾಳಿಸುದ್ದಿ ಹರಡಿದ್ದರಿಂದ ರಾತ್ರಿ 9ರ ಸುಮಾರಿಗೆ ವೇಳೆ ಮತಗಟ್ಟೆ ಬಳಿ ಜನ ಜಮಾಯಿಸಿದ್ದರು.

ಇದರಿಂದ ರೊಚ್ಚಿಗೆದ್ದ ಕೆಲವರು ಡಿ-ಮಸ್ಟರಿಂಗ್ ಕೇಂದ್ರಕ್ಕೆ ರಾತ್ರಿ 9.30ರ ಸುಮಾರಿಗೆ ಹೊರಟಿದ್ದ ಚುನಾವಣಾ ಸಿಬ್ಬಂದಿ ಇದ್ದ ವಾಹನವನ್ನು ತಡೆಗಟ್ಟಿದರು. ಆಗ ಅಧಿಕಾರಿಗಳು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನ ಸಾಗಲು ಅನುವು ಮಾಡಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರೂ ಜನರು ಕಿವಿಗೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನಾಕಾರರನ್ನು ಚದುರಿಸಲು ಹೆಚ್ಚುವರಿ ಪೊಲೀಸರನ್ನು ಚುನಾವಣಾ ಸಿಬ್ಬಂದಿ ಸ್ಥಳಕ್ಕೆ ಕರೆಸಿಕೊಂಡರು. ಜನರು ವಾಹನ ಸಾಗಲು ಅಡ್ಡಿಪಡಿಸಿದಾಗ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.