Recent Posts

Monday, January 20, 2025
ಅಂತಾರಾಷ್ಟ್ರೀಯಸುದ್ದಿ

ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕ –ಕಹಳೆ ನ್ಯೂಸ್

ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ಕಳೆದ ವರ್ಷವೇ ಅಮೆರಿಕ ಸರ್ಕಾರದ ಸಾಲಮಿತಿ ಮೀರಿಹೋಗಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಕೆಲವೇ ದಿನಗಳಲ್ಲಿ, ಅಥವಾ ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಅಮೆರಿಕ ಸಾಲದ ಹೊಡೆತಕ್ಕೆ ಕೆಳಗಪ್ಪಳಿಸಿ ಬೀಳಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಅಮೆರಿಕದಲ್ಲಿ ಶೀತ ಆದರೆ ಜಗತ್ತಿನ ಇತರ ಭಾಗದಲ್ಲಿ ನೆಗಡಿ ಆಗುತ್ತಂತೆ. ಇದು ಜೋಕ್ ಅಂತಾದರೂ ವಾಸ್ತವದಲ್ಲಿ ನಿಜ. ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಎಂದರೆ ಜಾಗತಿಕ ಆರ್ಥಿಕತೆಯ  ಬೆಳವಣಿಗೆಗೆ ಬೇಕಾದ ಒಂದು ದೊಡ್ಡ ಮಾರುಕಟ್ಟೆ ಎನ್ನಲಡ್ಡಿ ಇಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಗತಿಕ ಆರ್ಥಿಕತೆ ಅಮೆರಿಕದ ಮೇಲೆ ತಕ್ಕಮಟ್ಟಿಗೆ ಅವಲಂಬಿತವಾಗಿರುವುದು ಎಷ್ಟು ನಿಜವೋ ಹಾಗೆಯೇ, ಅಮೆರಿಕವೂ ಜಾಗತಿಕ ಆರ್ಥಿಕತೆಯ ಮೇಲೆ ನಿಂತಿರುವುದೂ ಅಷ್ಟೇ ನಿಜ. ಅಮೆರಿಕ ಪಕ್ಕಾ ಭೋಗ ದೇಶ ಅದಕ್ಕೆ ಅದು ಪ್ರಮುಖ ಜಾಗತಿಕ ಮಾರುಕಟ್ಟೆಯಾಗಿರುವುದು. ಭಾರತದ ಐಟಿ ಕಂಪನಿಗಳ ಬಹುತೇಕ ಆದಾಯ ಬರುವುದು ಅಮೆರಿಕದಿಂದಲೇ.ಇದೀಗ ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. `

ಕಳೆದ ವರ್ಷವೇ ಅಮೆರಿಕ ಸರ್ಕಾರದ ಸಾಲಮಿತಿ ಮೀರಿಹೋಗಿದೆ. ಈಗ ಕೆಲವೇ ದಿನಗಳಲ್ಲಿ, ಅಥವಾ ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಅಮೆರಿಕ ಸಾಲದ ಹೊಡೆತಕ್ಕೆ ಕೆಳಗಪ್ಪಳಿಸಿ ಬೀಳಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಆ ದಿನ ಜೂನ್ 1 ಇರಬಹುದು ಎಂದೂ ಕೆಲವರು ಅಂದಾಜು ಮಾಡುತ್ತಿದ್ದಾರೆ. ಅದು ನಿಜವೇ ಆದರೆ ಇನ್ನು, ಮೂರ್ನಾಲ್ಕು ವಾರದಲ್ಲಿ ಭೀಕರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಐಎಂಎಫ್ ಇತ್ಯಾದಿ ಮುಂದೆ ಭಿಕ್ಷಾಂ ದೇಹಿ ಎನ್ನಬೇಕಾದ ಸ್ಥಿತಿ ಬರಬಹುದು.