Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ನೆಟ್ಟಿಗರಲ್ಲಿದ್ದ ಅನುಮಾನಗಳಿಗೆ ತೆರೆ ಎಳೆದ ನಟ ನರೇಶ್ .. : ಹೌದು, ಪವಿತ್ರಾ ಲೋಕೇಶ್‌ನ್ನು ಮದುಮೆಯಾಗಿದ್ದೇನೆ ..!! –ಕಹಳೆ ನ್ಯೂಸ್

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆಯೇ? ಎಂಬ ನೆಟ್ಟಿಗರ ಪ್ರಶ್ನೆಗೆ ಸ್ವತಃ ನರೇಶ್ ಅವರೇ ಉತ್ತರ ನೀಡಿದ್ದಾರೆ.

ತೆಲುಗಿನ ಜನಪ್ರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇವರಿಬ್ಬರ ನಡುವಿನ ಸಂಬAಧದ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪವಿತ್ರಾ ಅವರೊಟ್ಟಿಗೆ ಆತ್ಮೀಯ ನಂಟು ಹೊಂದಿರುವ ನರೇಶ್ ವಿರುದ್ಧ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಹಲವು ಆರೋಪಗಳನ್ನು ಮಾಡಿದ್ದರು. ನರೇಶ್ ಒಬ್ಬ ಲಂಪಟ, ಪವಿತ್ರಾ ಲೋಕೇಶ್ ತಮ್ಮ ಸಂಸಾರ ಒಡೆದಿದ್ದಾರೆ ಎಂದೆಲ್ಲ ದೂರಿದ್ದರು. ನರೇಶ್, ಪವಿತ್ರಾ ಸಹ ರಮ್ಯಾರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದರು.
ರಮ್ಯಾ ರಘುಪತಿ, ತಮ್ಮ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಜೀವನದಲ್ಲಿ ಆದ ಘಟನೆಗಳನ್ನೇ ಮುಖ್ಯವಾಗಿರಿಸಿಕೊಂಡು ಮಳ್ಳಿ ಪೆಳ್ಳಿ ಹೆಸರಿನ ಸಿನಿಮಾ ನಿರ್ಮಿಸಿರುವ ನರೇಶ್, ಸಿನಿಮಾದಲ್ಲಿ ಸ್ವತಃ ನಟಿಸಿದ್ದಾರೆ. ನಾಯಕಿಯಾಗಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟ್ರೈಲರ್ ಮೇ 11 ರಂದು ಬಿಡುಗಡೆ ಆಗಿದ್ದು, ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಹಾಗೂ ಪವಿತ್ರಾ ಲೋಕೇಶ್ ಸಂಬAಧದ ಬಗ್ಗೆ ಮತ್ತೆ ಮಾತನಾಡಿದ್ದಾರೆ ನರೇಶ್.

‘ನೀವು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ?’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ನರೇಶ್, ”ಕೆಲವರು ತಾಳಿ ಕಟ್ಟಿ ಮದುವೆ ಮಾಡಿಕೊಳ್ಳುತ್ತಾರೆ. ಕೆಲವರು ಉಂಗುರ ಬದಲಾಯಿಸಿಕೊಂಡು ಮದುವೆ ಎನ್ನುತ್ತಾರೆ. ಇನ್ನು ಕೆಲವರು ಧರ್ಮ ಬದಲಾಯಿಸಿಕೊಂಡು ಮದುವೆಯಾಗುತ್ತಾರೆ. ನನ್ನ ದೃಷ್ಟಿಯಲ್ಲಿ ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ. ನಮ್ಮಿಬ್ಬರ ಮನಸ್ಸು ಸಂದಿಸಿವೆ. ನಮ್ಮದು ಹೃದಯಗಳ ಒಕ್ಕೂಟ’ ಎಂದಿದ್ದಾರೆ. ಆ ಮೂಲಕ ಶಾಸ್ತ್ರಬದ್ಧವಾಗಿ ಅಥವಾ ಕಾನೂನು ಬದ್ಧವಾಗಿ ತಾವು ಮದುವೆಯಾಗಿಲ್ಲ ಆದರೆ ಮಾನಸಿಕವಾಗಿ ಮದುವೆಯಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಧಿಕೃತವಾಗಿ ಮದುವೆ ಆಗಲು ಪ್ರಸ್ತುತ ಸಾಧ್ಯವಿಲ್ಲ. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ಇನ್ನೂ ವಿಚ್ಛೇದನ ನೀಡಿಲ್ಲ ಹೀಗಾಗಿ ಈಗಲೇ ಪವಿತ್ರಾರನ್ನು ಮದುವೆ ಆಗಲು ನರೇಶ್‌ಗೆ ಕಾನೂನು ತೊಡಕಿದೆ. ಹಾಗಾಗಿ ನರೇಶ್, ತಮ್ಮ ಹಾಗೂ ಪವಿತ್ರಾರ ‘ಮಾನಸಿಕ ಮದುವೆ’ಯನ್ನು ನಿಜ ಮದುವೆಯಾಗಿ ಪರಿವರ್ತಿಸಿಕೊಂಡಿಲ್ಲ.

ದೀಗ ತಮ್ಮ ಹಾಗೂ ಪವಿತ್ರಾರ ಸಂಬAಧ, ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪಗಳು, ನಡೆದ ಘಟನೆಗಳನ್ನೇ ಆದರಿಸಿ ಮಳ್ಳಿ ಪಳ್ಳಿ ಎಂಬ ಸಿನಿಮಾವನ್ನು ನರೇಶ್ ನಿರ್ಮಿಸಿದ್ದಾರೆ. ಸಿನಿಮಾಕ್ಕೆ ಎಂಎಸ್ ರಾಜು ಆಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾ ಮೇ 26 ರಂದು ತೆರೆಗೆ ಬರಲಿದೆ.