Recent Posts

Monday, January 20, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

60 ಅಭ್ಯರ್ಥಿಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ ಭದ್ರ.. –ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1860 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಎನ್‌ಐಟಿಕೆಯ ಭದ್ರತಾ ಕೊಠಡಿಗಳಲ್ಲಿ ಭದ್ರತಾ ಸಿಬಂದಿ ಸರ್ಪಗಾವಲಿನಲ್ಲಿ ಇಡಲಾಗಿದೆ.

ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಜಿಲ್ಲೆಯ 8 ಕ್ಷೇತ್ರಗಳ ಒಟ್ಟು 60 ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿರುವ ಇವಿಎಂಗಳು, ಮತಪತ್ರ, ಅಂಚೆ ಮತಪತ್ರಗಳನ್ನು ಒಳಗೊಂಡ ಮತ ಪೆಟ್ಟಿಗೆಗಳು, ವಿವಿ ಪ್ಯಾಟ್‌ಗಳು ಹಾಗೂ ಚುನಾವಣ ದಾಖಲೆಗಳನ್ನು ಎನ್‌ಐಟಿಕೆಯ ಭದ್ರತಾ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಭದ್ರತಾ ಕೊಠಡಿಗಳಿಗೆ ಮೊಹರು ಮಾಡಲಾಗಿದ್ದು, ಕೊಠಡಿಯ ಹೊರಗಡೆ ಅರೆಸೇನಾಪಡೆಯ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿ ಒಳಗೊಂಡ ಬಿಗಿ ಭದ್ರತೆಯನ್ನು ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಸಂಜೆ ಮತದಾನ ಮುಕ್ತಾಯ ಗೊಂಡಿದ್ದರೂ ಗ್ರಾಮೀಣ ಮತಗಟ್ಟೆಗಳಲ್ಲಿ ಮಳೆ ಯಿಂದಾಗಿ ಕೆಲವೆಡೆ ಮತದಾನ ವಿಳಂಬಗೊAಡಿತ್ತು. ಬಳಿಕ ಮೊಹರು ಮಾಡಿ ಆಯಾ ಕ್ಷೇತ್ರಗಳ ನಿಗದಿತ ಮಸ್ಟರಿಂಗ್ ಕೇಂದ್ರಗಳಿಗೆ ತಂದು ಅಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಡಿಮಸ್ಟ ರಿಂಗ್ ಪ್ರಕ್ರಿಯೆ ನಡೆಸಿ, ಇವಿಎಂ, ವಿವಿಪ್ಯಾಟ್‌ಗಳನ್ನು ಬಿಗಿ ಭದ್ರತೆಯೊಂದಿಗೆ ತಡರಾತ್ರಿಯೇ ಕೇಂದ್ರೀಯ ಅರೆಸೇನಾ ಪಡೆಯ ಗಸ್ತಿನೊಂದಿಗೆ ವಾಹನಗಳಲ್ಲಿ ಎನ್‌ಐಟಿಕೆ ಸ್ಟ್ರಾಂಗ್ ರೂಂಗೆ ರವಾನಿಸಲಾಗಿತ್ತು. ಈ ವಾಹಗಳನ್ನು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಏಜೆಂಟರು ಪ್ರತಿಯೊಂದು ಚುನಾವಣಾ ಕ್ಷೇತ್ರದಿಂದ ಮತ ಎಣಿಕೆ ಕೇಂದ್ರದವರೆಗೆ ಹಿಂಬಾಲಿಸಲು ಅವಕಾಶ ನೀಡಲಾಗಿತ್ತು. ಭದ್ರತಾ ಕೊಠಡಿಯಲ್ಲಿ ಇಟ್ಟು ಮೊಹರು ಮಾಡುವಾಗ ಅಭ್ಯರ್ಥಿಗಳು / ಏಜೆಂಟರು ಹಾಜರಿದ್ದು, ಭದ್ರತಾ ಕೊಠಡಿಯ ಬೀಗಕ್ಕೆ ತಮ್ಮ ಮೊಹರು/ ಸಹಿಯನ್ನು ಹಾಕುವ ಅವಕಾಶವನ್ನೂ ಕಲ್ಪಿಸಲಾಗಿತ್ತು.
ಮತ ಎಣಿಕೆಗೆ ಸಂಬAಧಿಸಿದ ಅಗತ್ಯ ಸಿದ್ಧತೆಗಳನ್ನು ದ.ಕ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ರವಿಕುಮಾರ್ ಎಂ.ಆರ್. ನೇತೃತ್ವದಲ್ಲಿ ನಿರ್ವಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು