Recent Posts

Monday, January 20, 2025
ಸುದ್ದಿ

ನಿರುದ್ಯೋಗಿಗಳಿಗೆ ಸಿಹಿಸುದ್ದಿ..! ಪೊಲೀಸ್ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್‌ಗೆ ಅರ್ಜಿ ಆಹ್ವಾನ – ಕಹಳೆ ನ್ಯೂಸ್

ಮಂಗಳೂರು ನಗರದ ಮುಖ್ಯ ಸಂಚಾರ ನಿಯಮ ಪಾಲಕರನ್ನಾಗಿ ಪೊ. ಎಂ.ಎಲ್. ಸುರೇಶ್‌ನಾಥ್‌ರನ್ನು ಮಂಗಳೂರು ಪೊಲೀಸ್ ಆಯುಕ್ತರು ನೇಮಕಗೊಳಿಸಿದ್ದಾರೆ.

ನಗರ ಪೊಲೀಸ್ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಚಾರ ನಿಯಮ ಪಾಲಕರ ಸಂಘಟನೆಯು ಇನ್ನು ಮುಂದೆ ಮಂಗಳೂರು ಸಿಟಿ ಪೊಲೀಸ್ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್ ಎಂಬ ಹೊಸ ಹೆಸರಿನೊಂದಿಗೆ ಕಾರ್ಯಾಚರಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸಕ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ದಿನಕ್ಕೆ 2 ಗಂಟೆ, ವಾರದಲ್ಲಿ 6 ಗಂಟೆ, ತಿಂಗಳಿಗೆ 24 ಗಂಟೆ (ಕನಿಷ್ಠ) ಹಾಗೂ ತಿಂಗಳಿಗೆ ಒಂದು ಬಾರಿ 2 ಗಂಟೆಗಳ ಪೇರೆಡ್, ಡ್ರೀಲ್, ಶಾರೀರಿಕ ಕವಾಯಿತು ಮಾಡಲು ಇಚ್ಛೆವುಳ್ಳ ಹಾಗೂ ಆರೋಗ್ಯವಂತರು ಇದರಲ್ಲಿ ಸೇರ್ಪಡೆಗೊಳ್ಳಲು ಅವಕಾಶವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನಿಷ್ಠ 20 ವರ್ಷ ಪ್ರಾಯದ, ಎಸೆಸೆಲ್ಸಿ ತೇರ್ಗಡೆಗೊಂಡ, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು ತಿಳಿದವರು ಆಯಾ ಪೊಲೀಸ್ ಠಾಣೆಗಳು ಅಥವಾ 9945875212 ವಾಟ್ಸ್ಆಯಪ್ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರೊ,ಎಂ.ಎಲ್. ಸುರೇಶನಾಥ, ಫ್ಲಾಟ್ ನಂಬರ್ 14, ಮಮತಾ ರೆಸಿಡೆನ್ಸಿ, ಆನೆಗುಂಡಿ ಒಂದನೇ ಅಡ್ಡ ರಸ್ತೆ, ಬಿಜೈ, ಮಂಗಳೂರು 575004ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.