Recent Posts

Monday, January 20, 2025
ಸುದ್ದಿ

ಬತ್ತು ಹೋಗಿದ್ದ ನೇತ್ರಾವತಿಗೆ ಮಳೆಯಿಂದ ಮತ್ತೆ ಜೀವಂತಿಕೆ –ಕಹಳೆ ನ್ಯೂಸ್

ಉಪ್ಪಿನಂಗಡಿ: ಕಳೆದ ಒಂದು ತಿಂಗಳ ಹಿಂದೆ ಹರಿವು ನಿಲ್ಲಿಸಿದ್ದ ನೇತ್ರಾವತಿ ನದಿಯಲ್ಲಿ ಮತ್ತೆ ನೀರು ಹರಿಯಲಾರಂಭಿಸಿದೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದೆರಡು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಗುರುವಾರ ಮುಂಜಾನೆಯಿAದಲೇ ನೀರಿನ ಹರಿವು ಪ್ರಾರಂಭಗೊAಡಿದ್ದು, ನೇತ್ರಾವತಿ ಮತ್ತೆ ಜೀವಂತಿಕೆ ಪಡೆದಂತಾಗಿದೆ.

ಎಪ್ರಿಲ್ 6ನೇ ತಾರೀಕಿನಿಂದ ಹರಿವು ಸ್ಥಗಿತಗೊಂಡು ಬಳಿಕ ಸಂಪೂರ್ಣ ಬರಡಾದ ನೇತ್ರಾವತಿ ಬಯಲಿನಂತಾಗಿತ್ತು. ಜಲಚರಗಳು ಜೀವಕಳೆದುಕೊಂಡು ಪಕ್ಷಿಗಳಿಗೆ ಆಹಾರವಾಗುತ್ತಿದ್ದ ದೃಶ್ಯ ಮನ ಕರಗುವಂತಿತ್ತು.

ಗುರುವಾರ ಸಾಯಂಕಾಲ ಸಾಧಾರಣ ಮಳೆಯಾದ ಪರಿಣಾಮ ರಾತ್ರಿ ಭಾರೀ ಗಾಳಿಯೊಂದಿಗೆ ಸಿಡಿಲಬ್ಬರದ ಮಳೆ ಸುರಿದಿದೆ. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದಾಗಿ ಹಲವೆಡೆ ಚರಂಡಿಗಳು ಮುಚ್ಚಲ್ಪಟ್ಟಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ಸಮಸ್ಯೆಗಳ ಉಲ್ಬಣಗೊಂಡಿದೆ.