ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಭಾಗವಾಗಿ ಮೆಲ್ಕಾರ್‌ನಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಬೆಳಗ್ಗಿನಿಂದಲೇ ವಾಹನಗಳು ಸರತಿಯಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಪ್ರಸ್ತುತ ಮೆಲ್ಕಾರ್‌ನ ಎರಡೂ ಬದಿಯ ಸರ್ವೀಸ್ ರಸ್ತೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶವಿದ್ದು, ಅದು ಕಿರಿದಾಗಿರುವ ಪರಿಣಾಮ ವಾಹನಗಳ ಸರಾಗ ಓಡಾಟಕ್ಕೆ ಅಡ್ಡಿಯಾಗಿದೆ. ಜತೆಗೆ ಬಸ್ಸುಗಳು ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ತಾ ಇದ್ದಾರೆ, ಇಂತಹ ವಾಹನಗಳು ನಿಧಾನವಾಗಿ ಸಾಗುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಮತ್ತೂAದೆಡೆ ಮುಡಿಪು ಭಾಗದ ರಸ್ತೆಯು ಮೆಲ್ಕಾರ್ ಜಂಕ್ಷನ್‌ನಲ್ಲೇ ಹೆದ್ದಾರಿಯನ್ನು ಸೇರುತ್ತಿದ್ದು, ಇಲ್ಲಿ ವಾಹನದವರು ಎತ್ತ ಸಾಗಬೇಕು ಎಂಬ ಗೊಂದಲಕ್ಕೀಡಾಗುತ್ತಿದ್ದು, ನಿತ್ಯವೂ ಟ್ರಾಫಿಕ್ ಕಿರಿಕಿರಿಯಿಂದ ಸ್ಥಳೀಯರು ಬೇಸತ್ತಿದ್ದಾರೆ. ಸಮಾರಂಭ ಇದ್ದ ದಿನಗಳಲ್ಲಿ ಹೆದ್ದಾರಿಯಲ್ಲಿ ದಿನವಿಡೀ ವಾಹನಗಳ ಸರತಿ ಕಂಡುಬರುತ್ತಿದೆ.
ಮೆಲ್ಕಾರ್‌ನ ಒಂದು ಬದಿಯಲ್ಲಿ ಪಾಣೆಮಂಗಳೂರು ಬೈಪಾಸ್‌ವರೆಗೆ ಹಾಗೂ ಮತ್ತೊಂದು ಬದಿಯಲ್ಲಿ ಬೋಳಂಗಡಿ ವರೆಗೂ ವಾಹನಗಳು ಹೆದ್ದಾರಿಯಲ್ಲಿ ನಿಲ್ಲಬೇಕಾಗಿದೆ. ಈ ಸಮಸ್ಯೆ ಯಿಂದಾಗಿ ಸಮಾರಂಭಕ್ಕೆ ತೆರಳುವವರಿಗೆ ನಿಗದಿತ ಸಮಯಕ್ಕೆ ತಲುಪಲಾಗುತ್ತಿಲ್ಲ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿ ಸಾರ್ವಜನಿಕರ ಆಗ್ರಹ.