Sunday, November 24, 2024
ಸುದ್ದಿ

ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಭಾರೀ ಮಳೆ; ಮರ ಬಿದ್ದು ರಸ್ತೆ ತಡೆ – ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ನಿನ್ನೆ ಸಂಜೆ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾದ ಪರಿಣಾಮ ಮರಗಳು ಉರುಳಿ ರಾಷ್ಟ್ರೀಯ ಹೆದ್ದಾರಿ ಸಹಿತ ರಸ್ತೆ ತಡೆ ಉಂಟಾಯಿತು. ಬೆಳಗ್ಗೆ ಬಿಸಿಲಿನ ವಾತಾವರಣದಿಂದ ಕೂಡಿದ್ದು, ಸಂಜೆಯಾಗುತ್ತಲೇ ಮೋಡ ಕವಿಯಲಾರಂಭಿಸಿ 5 ಗಂಟೆ ವೇಳೆಗೆ ಸಿಡಿಲು, ಮಿಂಚು ಸಹಿತ ಮಳೆ ಆರಂಭವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತoಗಡಿಯಿoದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಪಿಲಿಚಂಡಿಕಲ್ಲು ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ತಾಸುಗಳ ಕಾಲ ರಸ್ತೆ ತಡೆ ಉಂಟಾಯಿತು. ಸ್ಥಳೀಯರು ಜೆಸಿಬಿ ಮೂಲಕ ಮರ ತೆರವು ಮಾಡಿದರು. ಬಳಿಕ ಅರಣ್ಯ ಇಲಾಖೆ ಸಿಬಂದಿ ಮರ ತೆರವುಗೊಳಿಸಿದರು. ತುರ್ತು ಕಾರಣ ಸಹಿತ ದೂರದ ಊರಿಗೆ ಪ್ರಯಾಣಿಸುವ ಮಂದಿ ಪರದಾಡುವಂತಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತoಗಡಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಬಳಿ ಮರ ಉರುಳಿ ಬಿದ್ದು ಆವರಣ ಗೋಡೆಗೆ ಹಾಗೂ ವಿದ್ಯುತ್ ತಂತಿ, ಕಂಬ ಸಹಿತ ಮುರಿದುಬಿದ್ದಿದೆ. ಸವಣಾಲು ರಸ್ತೆಯ ಕಲ್ಕಣಿ ಬಳಿ ಮನೆಯೊಂದಕ್ಕೆ ತೆಂಗಿನ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ಗುರುದೇವ ಕಾಲೇಜು ಬಳಿ ತಿಂಗಿನ ಮರವೊಂದು ಧರೆಗುರುಳಿದೆ.
ಕುವೆಟ್ಟು ಗ್ರಾಮದ ಕವಿತಾ ರಮೇಶ್ ಪೂಜಾರಿ ಅವರ ಮನೆ ಭಾಗಶಃ ಹಾನಿಯಾಗಿದೆ. ತಾಲೂಕಿನಲ್ಲಿ ಒಟ್ಟು 12 ವಿದ್ಯುತ್ ಕಂಬಗಳು ಧರೆಗುರುಳಿವೆ. ಮಡಂತ್ಯಾರು. ಕುವೆಟ್ಟು, ಗೇರುಕಟ್ಟೆ, ಬೆಳ್ತಂಗಡಿ, ಲಾೖಲ ಸಹಿತ ಸುತ್ತಮುತ್ತ ಉತ್ತಮ ಮಳೆಯಾಗಿದ್ದು ಇತರೆಡೆ ಸಾಧಾರಣ ಮಳೆಯಾಗಿದೆ.