Friday, November 22, 2024
ಸುದ್ದಿ

ಖಾಸಗೀ ಕಂಪನಿಗಳು ಆಧಾರ್ ಮಾಹಿತಿ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ – ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲೇ ಬಹುಚರ್ಚಿತ ವಿಷಯವಾಗಿದ್ದ ಆಧಾರ್ ಮಾನ್ಯತೆ ವಿಚಾರದಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಕಾರ್ಡ್ ಸಾಂವಿಧಾನಿಕ ಅಂದಿರೋ ಸುಪ್ರೀಂ ಕೋರ್ಟ್ ಪಂಚಸದಸ್ಯ ಪೀಠ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಮಾಹಿತಿ ಕೇಳುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ. 

ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದೆ. ಒಟ್ಟು 40 ಪುಟಗಳ ತೀರ್ಪಿನ ಸಾರಾಂಶದಲ್ಲಿ ‘ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ’ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದಾರೆ. ಆಧಾರ್ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳಲ್ಲಿ ಮೂವರು ನ್ಯಾಯಮೂರ್ತಿಗಳು ಸಿಂಧುತ್ವವನ್ನು ಸ್ವಾಗತಿಸಿದ್ದರೆ, ಇನ್ನಿಬ್ಬರು ವಿರೋಧಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಣೆ ಸಂಸ್ಥೆಗಳಿಗೂ ಆಧಾರ್ ಕಡ್ಡಾಯವಲ್ಲ ಎಂದಿರೋ ಸುಪ್ರೀಂ, ಖಾಸಗೀ ಕಂಪನಿಗಳು ಆಧಾರ್ ಬಳಸುವಂತಿಲ್ಲ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂದಿದೆ.

ಆಧಾರ್ ಪ್ರತಿ ನಾಗರಿಕನಿಗೆ ಪ್ರತ್ಯೇಕ ಗುರುತು ನೀಡುತ್ತದೆ. ಇದು ಆಧಾರ್ ದಾಖಲೆಗೂ ಮತ್ತು ಗುರುತು ಪತ್ತೆ ಹಚ್ಚಲು ಬಳಸಲಾಗುವ ಇತರ ದಾಖಲೆಗಳಿಗೂ ಇರುವ ವ್ಯತ್ಯಾಸ ಎಂದಿರುವ ನ್ಯಾಯ ಪೀಠ, ಆಧಾರ್ ಮಾಹಿತಿಯನ್ನು ತಿರುಚಲು ಸಾಧ್ಯವಿಲ್ಲ. ನಕಲಿ ಆಧಾರ್ ಕಾರ್ಡ್ ಸೃಷ್ಟಿಯೂ ಸಾಧ್ಯವಿಲ್ಲ. ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲು ಸಾಧ್ಯವಿದ್ದರೆ ಅದನ್ನು ತಡೆಗಟ್ಟಲು ಯತ್ನಿಸಿ ಎಂದು ಹೇಳಿದೆ.

ಇನ್ನು ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆದರೆ ಸಮಾಜದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳು ಅಗತ್ಯ. ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ನಿಂದ ಉಪಯೋಗವಾಗುತ್ತಿದೆ’ ಎಂದು ಕೋರ್ಟ್ ಹೇಳಿದೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್, ಪಾಸ್ಪೋರ್ಟ್ ಹೊಂದಿ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆದರೆ ಒಂದಕ್ಕಿಂತ ಹೆಚ್ಚು ಬಯೋಮೆಟ್ರಿಕ್ ಮಾಹಿತಿ ಇರಲು ಸಾಧ್ಯವಿಲ್ಲ. ಆದ್ದರಿಂದ ಆಧಾರ್ ನಕಲು ಮಾಡಲು ಸಾಧ್ಯವಿಲ್ಲ ಎಂದಿದೆ.